ETV Bharat / state

ಬಜೆಟ್​ ವಿರುದ್ಧ ಜಗದೀಶ್​ ಶೆಟ್ಟರ್​ ವಿಡಿಯೋ ವೈರಲ್​: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ದೂರು - etv bharat kannada

ಶೆಟ್ಟರ್ ಹಳೇ ವಿಡಿಯೋ ಎಡಿಟ್ ಮಾಡಿ ಪೋಸ್ಟ್ - ಬಜೆಟ್​ ವಿರುದ್ಧ ಜಗದೀಶ್​ ಶೆಟ್ಟರ್​ ವಿಡಿಯೋ ವೈರಲ್- ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ದೂರು

jagadeesh
ಜಗದೀಶ್​ ಶೆಟ್ಟರ್​ ವಿಡಿಯೋ ವೈರಲ್
author img

By

Published : Feb 23, 2023, 1:03 PM IST

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೇಜೋವಧೆಗೆ ಮುಂದಾಗಿದ್ದವರ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಂಡಿಸಿದ್ದ ಬಜೆಟ್ ಅನ್ನು ಅಂದಿನ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ವಿರೋಧಿಸಿದ್ದರು. ಇದು ಮಾಧ್ಯಮದಲ್ಲಿ ಬಿತ್ತರವಾಗಿತ್ತು.

ಇದೇ ವಿಡಿಯೋ ಬಳಸಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಭಾಷಣವನ್ನು ಜಗದೀಶ ಶೆಟ್ಟರ್ ಅವರು ವಿರೋಧಿಸಿದಂತೆ ಸೃಷ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ. ಇದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. 'ಇದು ಒಳ್ಳೆಯ ಬಜೆಟ್​​​ನ ಲಕ್ಷಣ ಅಲ್ಲ. ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಮಾಡಿದ್ದಾರೆ. ಕೋಮುಗಲಭೆಯಲ್ಲಿ ಕರ್ನಾಟಕವನ್ನು ನಂಬರ್ ಟೂ ಸ್ಥಾನಕ್ಕೆ ತಂದಿದ್ದಾರೆ ಹಾಗಿದ್ದರೆ ಇದರರ್ಥ ಏನು? ಎಂದು ಜಗದೀಶ ಶೆಟ್ಟರ್ ಅವರು ಸಿದ್ದರಾಮಯ್ಯ ಬಜೆಟ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ.. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಂಸದರಿಗೆ ಕಟೀಲ್ ಸೂಚನೆ

ಅವರ ಹೇಳಿಕೆಯ ವಿಡಿಯೋದ ಅರ್ಧಭಾಗ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿದ್ದ ಬಜೆಟ್‌ನ ಅರ್ಧಭಾಗ ಸೇರಿಸಿ ಕಿಡಿಗೇಡಿಗಳು ವಿಡಿಯೋ ಸೃಷ್ಟಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಮೂಲಕ ಜಗದೀಶ ಶೆಟ್ಟರ್ ಅವರ ತೇಜೋವಧೆಯ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತೋಷ ನೆಲಮಂಗಲ ಅನ್ನುವ ಹೆಸರಿನ ಖಾತೆಯಿಂದ ಜಗದೀಶ್ ಶೆಟ್ಟರ್ ಈ ಹಿಂದೆ ವಿರೋಧ ಪಕ್ಷದ ನಾಯಕರಿದ್ದ ಸಂದರ್ಭದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್​​​ಗೆ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದರು‌. ಈಗ ಅದೇ ವಿಡಿಯೋವನ್ನು ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡನೆ ಮಾಡಿದ ಬಜೆಟ್​​ಗೆ ಪ್ರತಿಕ್ರಿಯೆ ಎಂಬಂತೆ ಬಿಂಬಿಸಲಾಗುತ್ತಿದೆ.

ಈ ವಿಡಿಯೋ ಸದ್ಯ ಫುಲ್ ವೈರಲ್ ಆಗುತ್ತಿದ್ದು, ಶೆಟ್ಟರ್ ಬಿಜೆಪಿ ಬಿಡಲು ಈ ರೀತಿಯ ಅಭಿಪ್ರಾಯ ಹೊರಹಾಕುತ್ತಿದ್ದಾರೆ ಅಂತ ವೈರಲ್ ಮಾಡಲಾಗುತ್ತಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಶೆಟ್ಟರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಉಪಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರು ಪ್ರತಿಪಕ್ಷದಲ್ಲಿದ್ದ ವೇಳೆ ಆಗಿನ ಸಿಎಂ ಸಿದ್ದರಾಮಯ್ಯರವರ ಬಜೆಟ್​ ವಿರುದ್ಧ ಮಾತನಾಡಿದ್ದರು. ಅದೇ ವಿಡಿಯೋವನ್ನು ಶೆಟ್ಟರ್​, ಸಿಎಂ ಬೊಮ್ಮಾಯಿ ಬಜೆಟ್​ ವಿರೋಧಿಸುತ್ತಿರುವಂತೆ ಎಡಿಟ್​ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಜೊತೆಗೆ ಅವರು ಬಿಜೆಪಿ ತೊರೆಯಲಿದ್ದಾರಾ? ಎಂಬ ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆ; ಇಡೀ ರಾತ್ರಿ ಕೋಲಾಹಲ, ಬಿಜೆಪಿ ವಿರುದ್ಧ ಮತಪೆಟ್ಟಿಗೆ ಕಳವು ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.