ಧಾರವಾಡ: ಏನಾದ್ರೂ ಕೇಳಿದರೆ ಅದನ್ನು ಟೀಕೆ ಅಂತ ಹತ್ತಿಕ್ಕುವುದು ಸರಿಯಲ್ಲ, ಟೀಕೆಗಳಿಂದಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಸುಧಾರಿಸಬಹುದು. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವುದು ಸರ್ವಾಧಿಕಾರತ್ವವಾಗುತ್ತದೆ ಎಂದು ಧಾರವಾಡದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ರು.
ಧಾರವಾಡದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ ಅವರಿಗೆ ನೋಟೀಸ್ ಕೊಟ್ಟಿದ್ದನ್ನು ನೋಡಿದ್ರೆ ಇದೊಂದು ಸರ್ವಾಧಿಕಾರತ್ವ ಅನ್ಸುತ್ತೆ. ಯತ್ನಾಳ ಮಾತನಾಡುವುದನ್ನು ಹತ್ತಿಕ್ಕುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದ್ರು.
ಟೀಕೆಯಿಂದಲೇ ಸತ್ಯ ಮತ್ತು ಸೂಕ್ತ ಯಾವುದು ಅಂತಾ ತಳಿಯೋಕೆ ಸಾಧ್ಯವಾಗುತ್ತದೆ. ಯತ್ನಾಳ್ ಬಿಜೆಪಿ ಪಾರ್ಟಿಯ ಗುಲಾಮರೇನು? ಅವರೊಬ್ಬ ಸ್ವಾಭಿಮಾನಿ ವ್ಯಕ್ತಿ.ಅವರು ಮಾತನಾಡಿದ್ದಕ್ಕೆ ನಾನು ಶಹಬ್ಬಾಸ್ ಹೇಳುವೆ ಎಂದರು.
ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರವಾಹ ಪೀಡಿತ ಜನರ ಗೋಳು ನೋಡಿದರೂ ಇವರಿಗೆ ಗೊತ್ತಾಗುತ್ತಿಲ್ಲ. ಊಟ ನೀರು ಬಿಟ್ಟು ಸಂತ್ರಸ್ಥರು ದಿನದೂಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ತಮ್ಮ ತಾಳ್ಮೆ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.