ETV Bharat / state

ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು: ಬಸವರಾಜ ಹೊರಟ್ಟಿ ಇಂಗಿತ

ಅಂಕಿ ಅಂಶಗಳ ಪ್ರಕಾರ, 22 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇದೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುವುದರ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ ಎಂದು ಮಾಜಿ ಶಿಕ್ಷಣ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ರು.

author img

By

Published : Sep 6, 2019, 9:24 AM IST

ಬಸವರಾಜ ಹೊರಟ್ಟಿ

ಹುಬ್ಬಳ್ಳಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಅಂಕಿ ಅಂಶಗಳ ಪ್ರಕಾರ, 22 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇದೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುವುದರ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ. ಈ ಮೂಲಕ ಶಾಲೆಗಳ ಉಳಿವಿಗೆ ಬದ್ಧರಾಗಬೇಕು ಎಂದು ಮಾಜಿ ಶಿಕ್ಷಣ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಿಸಲಾಯ್ತು.

ಬಸವರಾಜ ಹೊರಟ್ಟಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಅನುಪಾತ ಕಡಿಮೆಯಾಗುವುದರ ಮೊದಲ ಪರಿಣಾಮವನ್ನು ಶಿಕ್ಷಕರು ಎದುರಿಸಬೇಕಾಗುತ್ತದೆ. 2026 ರ ವೇಳೆಗೆ ಬಹುತೇಕ ಕನ್ನಡ ಶಾಲೆ ಮುಚ್ಚಿ ಹೋಗುವ ಭೀತಿಯಿದೆ. ಅದಕ್ಕಾಗಿ ಶಿಕ್ಷಕರು ಕಾಳಜಿ ವಹಿಸಿ ಬೋಧನೆ ಮಾಡಬೇಕು. ಸ್ವಪ್ರೇರಣೆಯಿಂದ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲು ಮಾಡಬೇಕು‌ ಎಂದರು.

It should be the job of saving government schools : Basavaraja Horatti
ಶಿಕ್ಷಕರ ದಿನಾಚರಣೆ

ಲ್ಯಾಪ್‌ಟಾಪ್ ವಿತರಣೆ :

ಉತ್ತಮ ಅಂಕಗಳನ್ನು ಪಡೆದ ಕುರಡಿಕೇರಿ ಸರ್ಕಾರಿ ಫ್ರೌಡಶಾಲೆ ಚೈತ್ರಾ ರಂಗಪ್ಪ ಹುಲಮನಿ, ಅಶ್ವಿನಿ ಮಾರುತಿ ಉಣಕಲ್​ ಹಾಗೂ ಜ್ಯೋತಿ ಮಹದೇವಪ್ಪ ತೊಲಗಬಾಗಿ ಇವರಿಗೆ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಯ ಮುಖ್ಯೋಪಧ್ಯಾಯರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

Intro:ಹುಬ್ಬಳ್ಳಿ-05

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಅಂಕಿ ಅಂಶಗಳ ಪ್ರಕಾರ 22 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 10 ಕಡಿಮೆ ವಿದ್ಯಾರ್ಥಿಗಳ ದಾಖಲಾತಿದೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಬೋದನೆ ಮಾಡುವುದರ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ, ಶಾಲೆಗಳ ಉಳಿವಿಗೆ ಕಂಕಣ ಬದ್ದರಾಗಬೇಕು ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳಲಾಗಿದ್ ಭಾರತ ರತ್ನ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್‍ರವರ  ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ಅನುಪಾತ ಕಮ್ಮಿಯಾಗುವುದರ ಮೊದಲ ಪರಿಣಾಮವನ್ನು ಶಿಕ್ಷಕರು ಎದುರಿಸಬೇಕಾಗುತ್ತದೆ. ಇದರಿಂದಾಗಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಉಂಟಾಗಿ ಕಡ್ಡಾಯ ವರ್ಗಾವಣೆ ಅಥವಾ ಇತರೆ ಸ್ಥಳಗಳಿಗೆ ನಿಯೋಜನೆ ಮಾಡುವ ಪರಿಸ್ಥಿತಿ ಒದಗಿಬಂದಿದೆ. 2026ರ ವೇಳೆಗೆ ಬಹುತೇಕ ಕನ್ನಡ ಶಾಲೆ ಮುಚ್ಚಿ ಹೊಗುವ ದುಸ್ವಪ್ನ ಕಾಡುತ್ತಿದೆ. ಈ ವಿಪತ್ತಿನಿಂದ ಪಾರಾಗಲು ಇರುವ ಒಂದೇ ದಾರಿಯಂದರೆ, ಶಿಕ್ಷಕರು ಕಾಳಜಿ ವಹಿಸಿ ಬೋದನೆ ಮಾಡಬೇಕು. ಸ್ವಪ್ರೇರಣೆಯಿಂದ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲು ಮಾಡಬೇಕು‌ ಎಂದರು.
ಪೋಷಕರು ಖಾಸಗಿ ಶಾಲೆಗಳಿಗೆ ಮಾರು ಹೋಗಿದ್ದಾರೆ. ಇಂಗ್ಲೀಷ್ ಮಾಧ್ಯಮದ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ಸರ್ಕಾರ ಕರ್ನಾಟಕ ಪಬ್ಲಿಕ್ ಮಾದರಿ ಶಾಲೆಗಳನ್ನು ತೆರೆದು ಇಂಗ್ಲೀಷ್ ಮಾಧ್ಯಮ ಪರಿಚಯಿಸಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗಳನ್ನು ತರಲಾಗಿದೆ. ಇಷ್ಟೆಲ್ಲದರ ಮಧ್ಯಯೂ ಮಕ್ಕಳ ದಾಖಲಾತಿ ಕುಂಠಿತವಾಗಿದೆ. ಮಕ್ಕಳೇ ಶಾಲೆಗಳೆಗೆ ಆಧಾರ, ಮಕ್ಕಳು ಇರದಿದ್ದರೆ ಶಾಲೆಗಳನ್ನು ಮುಚ್ಚಲಾಗುತ್ತದೆ. ಹೆಚ್ಚುವರಿ ಶಿಕ್ಷಕರ ಸಮಸ್ಯೆಯ ಜೊತೆಗೆ ಶಿಕ್ಷಕ ತರಬೇತಿ ಹೊಂದಿದವರಿಗೂ ಸರ್ಕಾರಿ ಶಾಲಾ ಶಿಕ್ಷಕರಾಗುವ ಅವಕಾಶ ಇಲ್ಲದಂತಾಗುತ್ತೆ. ಶಿಕ್ಷಕರು‌ ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಲ್ಯಾಪ್‌ಟಾಪ್ ವಿತರಣೆ

ಉತ್ತಮ ಅಂಕಗಳನ್ನು ಪಡೆದ, ಕುರಡಿಕೇರಿ ಸರ್ಕಾರಿ ಫ್ರೌಡಶಾಲೆ
ಚೈತ್ರಾ ರಂಗಪ್ಪ ಹುಲಮನಿ, ಅಶ್ವಿನಿ ಮಾರುತಿ ಉಣಕಲ್ಲ ಹಾಗೂ ಕುಸುಗಳಲ್ಲ ಶಾಲೆಯ ಜ್ಯೋತಿ ಮದೇವಪ್ಪ ತೊಲಗಬಾಗಿ ಇವರಿಗೆ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ ಶಾಲೆಯ ಮುಖ್ಯೋಪಧ್ಯಾಯರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.