ETV Bharat / state

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಐಟಿ ದಾಳಿ, ಅಧಿಕಾರಿಗಳು ಬಿಜೆಪಿ ಏಜೆಂಟ್​ರಂತೆ ವರ್ತಿಸುತ್ತಿದ್ದಾರೆ: ಶಿವಲೀಲಾ ಆರೋಪ

author img

By

Published : May 6, 2023, 2:06 PM IST

Updated : May 6, 2023, 5:51 PM IST

ನಮ್ಮ‌ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಧಿಕಾರಿಗಳು ಯಾರೂ ಸ್ಪಂದನೆ ಮಾಡ್ತಿಲ್ಲ. ವಿನಯ ಕುಲಕರ್ಣಿ ಜಿಲ್ಲೆಯ ಹೊರಗಡೆ ಇದ್ದಾರೆ. ನಾವೇನು ಮಾಡಿದರೂ ನಡೆಯುತ್ತೆ ಅನ್ನೋ ರೀತಿ ಅಧಿಕಾರಿಗಳ ವರ್ತನೆ ಇದೆ ಎಂದು ಶಿವಲೀಲಾ ಕುಲಕರ್ಣಿ ಆರೋಪ ಮಾಡಿದ್ದಾರೆ.

Shivleela Kulkarni spoke at the press conference.
ಶಿವಲೀಲಾ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಲೀಲಾ ಆರೋಪ

ಧಾರವಾಡ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹರಿಹಾಯ್ದಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದರು. ವಿನಯ ಕುಲಕರ್ಣಿ ಆಪ್ತ ಪ್ರಶಾಂತ, ಈಶ್ವರ ಶಿವಳ್ಳಿ, ಎಗನಗೌಡರ, ಪ್ರದೀಪ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ವಿನಯ ಕುಲಕರ್ಣಿ ಪರವಾಗಿ ಸ್ಟೇಟಸ್ ಹಾಕಿಕೊಂಡ್ರೆ 107 ಸೆಕ್ಷನ್ ಕೇಸ್ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಬಿಸ್ನೆಸ್ ಬಗ್ಗೆ ಪ್ರಶ್ನೆ ಕೇಳೋದನ್ನು ಬಿಟ್ಟು ಪಕ್ಷದ ಸ್ಟ್ಯಾಟರ್ಜಿ ಬಗ್ಗೆ ಪ್ರಶ್ನೆ ಕೇಳ್ತಿದ್ದಾರೆ. ನಿಮ್ಮ ಸ್ಟ್ಯಾಟರ್ಜಿ ಏನು, ಸೋರ್ಸ್​​ ಎಲ್ಲಿಂದ ಬರ್ತಾ ಇದೆ ಅಂತ ಕೇಳ್ತಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್​​ಗೆ ಯಾಕೆ ಬಂದ್ರಿ ಅನ್ನೋ ಪ್ರಶ್ನೆಯನ್ನು ಐಟಿ‌ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅಪಾದನೆ ಮಾಡಿದರು. ಕಾರ್ಯಕರ್ತರನ್ನು ಎರಡು ದಿವಸಗಳಷ್ಟು ಹಿಡಿದು ಕೂರಿಸಿ, ಚುನಾವಣೆಯಲ್ಲಿ ಕೆಲಸ ಮಾಡದಂತೆ ಹತ್ತಿಕ್ಕಲಾಗುತ್ತಿದೆ. ಇದು ರಾಜಕೀಯ ಷಡ್ಯಂತ್ರ ಆಲ್ವಾ? ಚುನಾವಣೆ ವೇಳೆ ಈ ರೀತಿ ಮಾಡೋದು ಎಷ್ಟು ಸರಿ ಇದಕ್ಕೆ ಉತ್ತರ ಧಾರವಾಡ ಗ್ರಾಮೀಣ ಕ್ಷೇತ್ರದ ಜನರು ಕೊಡಬೇಕು. ರಾಜಕೀಯವಾಗಿ‌ ಹತ್ತಿಕುವ ಕೆಲಸ ಮಾಡಲಾಗುತ್ತಿದೆ. ಚುನಾವಣೆ ವೇಳೆ ನಮಗೆ ಡಿಸ್ಟರ್ಬ್ ಮಾಡಲು ಈ ರೀತಿ ಮಾಡಲಾಗುತ್ತಿದೆ. ಅಧಿಕಾರಿಗಳು ಬಿಜೆಪಿ ಏಜೆಂಂಟ್ ರಂತೆ ವರ್ತನೆ ಮಾಡುತಿದ್ದಾರೆ ಎಂದು ದೂರಿದರು.

ನಮ್ಮ‌ ಕ್ಷೇತ್ರದಲ್ಲಿ ಅಧಿಕಾರಿಗಳು ಯಾರೂ ಸ್ಪಂದನೆ ಮಾಡ್ತಿಲ್ಲ. ವಿನಯ ಕುಲಕರ್ಣಿ ಜಿಲ್ಲೆಯ ಹೊರಗಡೆ ಇದ್ದಾರೆ. ನಾವೇನು ಮಾಡಿದರೂ ನಡಿಯುತ್ತೆ ಅನ್ನೋ ರೀತಿ ಅಧಿಕಾರಿಗಳ ವರ್ತನೆ ಇದೆ. ಇದು ಸ್ವಯಂ ಪ್ರೇರಿತ ದಾಳಿ ಅಲ್ಲ. ಬಿಜೆಪಿಯವರು ಮಾಡಿಸುತ್ತಿರುವಂತ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿನಯ್​ ಕುಲಕರ್ಣಿಯ‌ ಆಪ್ತನಿಗೆ ಐಟಿ ನೋಟಿಸ್: ಮಾಜಿ ಸಚಿವ ವಿನಯ್​ ಕುಲಕರ್ಣಿಯ‌ ಮತ್ತೊಬ್ಬ ಆಪ್ತನಿಗೆ ಐಟಿ ಇಲಾಖೆ ನೋಟಿಸ್​ ನೀಡಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ಐಟಿ ಕಚೇರಿಗೆ ಆಗಮಿಸುವಂತೆ ವಿನಯ‌್​ ಪರ ಚುನಾವಣಾ ಪ್ರಚಾರದಲ್ಲಿ ಓಡಾಡುತ್ತಿದ್ದ ಅರವಿಂದ ಏಗನಗೌಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ದಾಖಲೆ ಸಮೇತ ಕಚೇರಿ ಬರುವಂತೆ ಏಗನಗೌಡರ್​ಗೆ ನೋಟಿಸ್ ನೀಡಿರುವ ಐಟಿ ಅಧಿಕಾರಿಗಳು, ಗುರುವಾರವಷ್ಟೇ ವಿನಯ‌್​ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಹಾಗೂ ಈಶ್ವರ ಶಿವಳ್ಳಿ ಮನೆ ಮೇಲೆ ದಾಳಿ ಮಾಡಿದ್ದರು. ಅರವಿಂದ ಧಾರವಾಡ ಗ್ರಾಮೀಣ‌ ಕ್ಷೇತದ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಈ ಹಿಂದೆ ಬಿಜೆಪಿಯಲ್ಲಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು.

ನನ್ನ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಷಡ್ಯಂತ್ರ: ನನ್ನ ಮತ್ತು ನನ್ನ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ನನ್ನ ಮೇಲೆ ಈ ರೀತಿ ಕುತಂತ್ರ ಮಾಡಿದ್ದು ಬಿಜೆಪಿ. ಈ ಹೇಳಿಕೆಗೆ ನಾನು ಬದ್ಧ, ಕಳೆದ ಬಾರಿ ಚುನಾವಣೆಯಲ್ಲೂ ನನ್ನ ಪಿಎಗಳ ಮೇಲೂ ಐಟಿ ರೇಡ್ ಮಾಡಿಸಿದ್ದರು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ. ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆ ಹೆಸರಿನಲ್ಲಿ ನನ್ನನ್ನು ಮತ್ತು ನನ್ನ ಆಪ್ತ ಸಹಾಯಕರನ್ನು ಐದು ದಿನ ಹೊರಗೆ ಬಿಟ್ಟಿರಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೂಲೆ ಎಂದು ಹರಿಹಾಯ್ದರು.

ಹೈಕೋರ್ಟ್​ ಚುನಾವಣೆ ಪ್ರಚಾರ ನಡೆಸಲು ನನಗೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ಕ್ಷೇತ್ರದಿಂದ ಹೊರಗೆ ಇದ್ದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.ಕಳೆದ 23 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀನಿ. ಕ್ಷೇತ್ರದ ಜನರು ಮರಳಿ ಮತ್ತೆ ನನಗೆ ಅವಕಾಶ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:ಹುಬ್ಬಳ್ಳಿಯಲ್ಲಿಂದು ​ಸೋನಿಯಾ ಗಾಂಧಿ ಚುನಾವಣಾ ರ‍್ಯಾಲಿ

Last Updated : May 6, 2023, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.