ಧಾರವಾಡ: ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಐಎಸ್‌ಡಿ ಮುಖ್ಯಸ್ಥ ಭಾಸ್ಕರ ರಾವ್ ಪ್ರತಿಕ್ರಿಯಿಸಿದ್ದಾರೆ.
ಈಗ ಹೊರ ಬಂದಿರೋದು ‘ಟಿಪ್ ಆಫ್ ದಿ ಐಸ್ ಬರ್ಗ್’ ಅಷ್ಟೇ ಡ್ರಗ್ಸ್ ಕೇಸ್‌ನಲ್ಲಿ ಪೆಡ್ಲರ್ ಮತ್ತು ಕಂಜ್ಯುಮರ್ ವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಎಂಬುದು ಪತ್ತೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಮಿಕಲ್ ಮತ್ತು ಆರ್ಟಿಪಿಷಿಯನ್ ಡ್ರಗ್ ಹೊರ ದೇಶದಿಂದ ಬರುತ್ತಿದೆ. ಸಮುದ್ರ ಮತ್ತು ವಿಮಾನ ನಿಲ್ದಾಣದಿಂದ ಬರತ್ತಾ ಇದೆಯಾ ನೋಡಿ ಟೈಟ್ ಮಾಡಬೇಕಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಶಾಮೀಲಾಗಿದ್ದಾರಾ ?. ಅವರ ಪಾತ್ರ ಇದರಲ್ಲಿ ಏನಿದೆ ಎಂಬುದು ಶೋಧಿಸುವ ಕಾರ್ಯದಲ್ಲಿ ಐಎಸ್‌ಡಿ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ.