ETV Bharat / state

ಕಾಂಗ್ರೆಸ್ ಸರ್ಕಾರ ಬಂದಾಗಿದ್ದ ಅಧಿಕಾರಕ್ಕಾಗಿ ಹೊಡೆದಾಟ ನಡೆದೇ ಇದೆ : ಶಾಸಕ ಅರವಿಂದ ಬೆಲ್ಲದ

Opposition leader: ಹೆಚ್​ಡಿಕೆ ನಮ್ಮ ಪಕ್ಷದಲ್ಲಿ‌ ಇಲ್ಲ. ಇನ್ನೂ ಸೀಟ್ ಶೇರಿಂಗ್ ಆಗಿಲ್ಲ. ಜಸ್ಟ್ ಪಾರ್ಟ್ ಆಪ್ NDA ಅವರು. ನಮ್ಮ‌ ಪಕ್ಷದ ಶಾಸಕರು ಹೆಚ್ಚಿದ್ದಾರೆ. ಬಿಜೆಪಿ ಪಕ್ಷದ ನಾಯಕರೇ ವಿಪಕ್ಷನಾಯಕ ಆಗ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

MLA Arvinda Bella spoke at the news conference.
ಶಾಸಕ ಅರವಿಂದ ಬೆಲ್ಲದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Nov 2, 2023, 4:06 PM IST

Updated : Nov 2, 2023, 5:35 PM IST

ಶಾಸಕ ಅರವಿಂದ ಬೆಲ್ಲದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದು ಮೊದಲ ತಿಂಗಳಿನಿಂದ ಗದ್ದಲ ಆರಂಭವಾಗಿದೆ. ಇದು ಹನಿಮೂನ್​ ಸಮಯ. ಒಂದೇ ತಿಂಗಳಲ್ಲಿ ಅಸಮಾಧಾನ ಶುರುವಾಗಿದೆ ಎಂದು ಸರ್ಕಾರದ ವಿರುದ್ದ ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪ್ರಕಾರ ಸಿದ್ದರಾಮಯ್ಯ ಎರಡೂವರೆ ವರ್ಷ, ಡಿ ಕೆ ಶಿವಕುಮಾರ್ ಎರಡೂವರೆ ವರ್ಷ ಅನ್ನೋ ಮಾಹಿತಿ ಇತ್ತು. ಆದ್ರೆ ಸಿದ್ದರಾಮಯ್ಯ ಈಗಿನಿಂದಲೇ ನಾಲ್ಕು ಜನರನ್ನು ರೆಡಿ ಮಾಡಿದ್ದಾರೆ. ಎರಡು ವರ್ಷ ಆದ ಬಳಿಕ ನಾಲ್ಕು ಜನರ ನಡುವೆ ಜಗಳ ಹಚ್ಚಿ ಅವರೇ ಮುಂದುವರಿಯಬೇಕು ಅಂದುಕೊಂಡಿದ್ದಾರೆ. ಆದರೆ ಅದು ಆಗಲ್ಲ. ಪಕ್ಷಕ್ಕೆ ಬಹಳ ಜನ ಕೆಲಸ ಮಾಡಿರ್ತಾರೆ. ನಾವು ಅವರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಯತ್ನಾಳ ಟ್ವೀಟ್ ವಿಚಾರಕ್ಕೆ ಮಾತನಾಡಿದ ಅವರು, ಸರ್ಕಾರದಲ್ಲಿ ಜಗಳ ಆರಂಭವಾಗಿದೆ. ಸಂಶಯ ಬರೋ ತರಹ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥ ಮಾತು ಸಹಜ. ಕುಮಾರಸ್ವಾಮಿ ವಿಪಕ್ಷ ನಾಯಕರಾಗ್ತಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹೆಚ್​ಡಿಕೆ ನಮ್ಮ ಪಕ್ಷದಲ್ಲಿ‌ ಇಲ್ಲ. ಇನ್ನೂ ಸೀಟ್ ಶೇರಿಂಗ್ ಆಗಿಲ್ಲ. ಅವರು ಜಸ್ಟ್ ಪಾರ್ಟ್ ಆಪ್ NDA. ನಮ್ಮ‌ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ನಮ್ಮ ಪಕ್ಷದ ನಾಯಕರನ್ನು ವಿಪಕ್ಷ ನಾಯಕರನ್ನಾಗಿ ಮಾಡ್ತಾರೆ.

ನಾವು ಸರ್ಕಾರ ತಗೆಯೋ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾಂಗ್ರೆಸ್​ನವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಏನೂ ಕೆಲಸ ಮಾಡಬೇಕು ಅದನ್ನು ಮಾಡಿಲ್ಲ. ಹುಲಿ ಉಗುರು ಎಂದು ಗದ್ದಲ ಎಬ್ಬಿಸಿದೆ. ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ಹೊಡೆದಾಡುತ್ತಿದ್ದಾರೆ‌ ಎಂದು ವ್ಯಂಗ್ಯವಾಡಿದರು.

ಪಾಲಿಕೆ ಸದಸ್ಯರಿಗೆ ಪ್ರಶಿಕ್ಷಣ ಕಾರ್ಯಾಗಾರ: ಬಿಜೆಪಿ ಚುನಾಯಿತ ಮಹಾನಗರ ಪಾಲಿಕೆ ಸದಸ್ಯರಿಗೆ ಸೂಕ್ತ ರೀತಿಯಲ್ಲಿ ಆಡಳಿತ ಶಿಕ್ಷಣ ನೀಡುವ ಹಾಗೂ ಮೋದಿಯವರ ಅಭಿವೃದ್ಧಿ ಕಾರ್ಯಗಳ ಮನವರಿಕೆ ಮಾಡುವ ಜೊತೆಗೆ ರಾಜಕೀಯ ವಿದ್ಯಮಾನಗಳ ಕುರಿತು ಶಿಕ್ಷಣ ನೀಡುವ ಸದುದ್ದೇಶದಿಂದ ಬಿಜೆಪಿಯಿಂದ ಪ್ರಶಿಕ್ಷಣ ಕಾರ್ಯಾಗಾರವನ್ನು ಇದೇ ನವೆಂಬರ್ 3 ಮತ್ತು 4ರಂದು ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ ಏಳು ಮಹಾನಗರ ಪಾಲಿಕೆಯ 197 ಚುನಾಯಿತ ಸದಸ್ಯರು ಭಾಗವಹಿಸಲಿದ್ದು, ಹುಬ್ಬಳ್ಳಿಯ ಭೈರಿದೇವರಕೊಪ್ಪದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಏಳು ಗೋಷ್ಠಿಗಳಿದ್ದು, ಸ್ಥಳೀಯ ಶಾಸಕರು, ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಸೇರಿದಂತೆ ಬಹುತೇಕ ಬಿಜೆಪಿ ಮುಖಂಡರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಇದನ್ನೂಓದಿ:ನಿತ್ಯ ಮೋದಿ ವಿರುದ್ಧ ಮಾತಾಡುವ ನಿಮ್ಮನ್ನು ಯಾರು ಹತ್ತಿರ ಬಿಟ್ಟುಕೊಳ್ತಾರೆ?: ಯಡಿಯೂರಪ್ಪ

Last Updated : Nov 2, 2023, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.