ETV Bharat / state

ಉತ್ತರಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಗೆ ಒತ್ತು ನೀಡಿಲ್ಲ; ವಾಣಿಜ್ಯೋದ್ಯಮ ಸಂಸ್ಥೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಸಿದ್ದರಾಮಯ್ಯ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ಬಜೆಟ್ ಮಂಡಿಸಿದ್ದಾರೆ ಎಂದು ಕರ್ನಾಟಕ ವಾಣಿಜೋದ್ಯನ ಸಂಸ್ಥೆ ತಿಳಿಸಿದೆ.

ವಾಣಿಜ್ಯೋದ್ಯಮ ಸಂಸ್ಥೆ
ವಾಣಿಜ್ಯೋದ್ಯಮ ಸಂಸ್ಥೆ
author img

By

Published : Jul 7, 2023, 4:46 PM IST

ಉತ್ತರಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಗೆ ಹೊತ್ತು ನೀಡಿಲ್ಲ

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಅನ್ನು ಕರ್ನಾಟಕ ವಾಣಿಜೋದ್ಯನ ಸಂಸ್ಥೆ ಸ್ವಾಗತಿಸಿದ್ದು, ರಾಜ್ಯ ಎಂದರೇ ಬೆಂಗಳೂರು ಎಂಬುವಂತ ಮನಸ್ಥಿತಿ ಬಿಟ್ಟು, ಬೆಂಗಳೂರು ಹೊರತಾಗಿ ಕೈಗಾರಿಕರಣ ಹಾಗೂ ಪ್ರವಾಸೋದ್ಯಮಕ್ಕೆ ಸರ್ಕಾರ ಆದ್ಯತೆ ನೀಡಬೇಕಿತ್ತು. ಸಿದ್ಧರಾಮಯ್ಯ ಅವರು ಮಂಡಿಸಿರುವ ಬಜೆಟ್ ಪ್ರಾದೇಶಿಕ ಅಸಮತೋಲನ ಹೊರತುಪಡಿಸಿದರೇ ಇದೊಂದು ಉತ್ತಮ ಬಜೆಟ್ ಎಂದು ಚಾರ್ಟರ್ಡ್ ಅಕೌಂಟೆಂಟ್ ಶೇಷಗಿರಿ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಜೆಟ್ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿ ಶೇಷಗಿರಿ ಕುಲಕರ್ಣಿ ಅವರು, ಬಜೆಟ್ ನಲ್ಲಿ ಪ್ರಾದೇಶಿಕ ಅಸಮಾನತೆಯಿದೆ. ಸಿಎಂ ಸಿದ್ದರಾಮಯ್ಯ ಬರೀ ಬೆಂಗಳೂರನ್ನು ಮಾತ್ರ ಅಭಿವೃದ್ಧಿಪಡಿಸಲು ಬಜೆಟ್ ನೀಡಿದ್ದಾರೆ. ಆದರೇ ಉತ್ತರಕರ್ನಾಟಕ ಭಾಗದ ಬಗ್ಗೆಯೂ ಸರ್ಕಾರ ಗಮನ ಕೊಡಬೇಕಿತ್ತು. ಮೆಟ್ರೋ, ರಸ್ತೆ ನಿರ್ಮಾಣ ಸೇರಿ ಎಲ್ಲಾ ಯೋಜನೆ ಬೆಂಗಳೂರಿಗೆ ಅನೌನ್ಸ್ ಮಾಡಿದ್ದಾರೆ. ಕರ್ನಾಟಕದ ಇತರ ಭಾಗಗಳು ಹೇಗೆ ಬೆಳವಣಿಗೆ ಆಗಬೇಕು ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಲ್ಲದೇ ಸೆಮಿ ಕಂಡಕ್ಟರ್ ಬಿಜಿನೆಸ್ ಹುಬ್ಬಳ್ಳಿ, ಬೆಳಗಾವಿ ಭಾಗಕ್ಕೆ ಕೊಡಬೇಕಿತ್ತು. ಆದರೇ ಕೊಟ್ಟಿಲ್ಲ. ಇದರಿಂದ ಬೆಂಗಳೂರನ್ನು ಹೊರತುಪಡಿಸಿ ಉಳಿದ ಕರ್ನಾಟಕದ ಯಾವುದೇ ಭಾಗದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿ ಒತ್ತು ನೀಡಿಲ್ಲ. ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಮರೆಯುತ್ತಿದ್ದಾರೆ. ಹೀಗಾಗಿ ಪ್ರಾದೇಶಿಕ ಅಸಮತೋಲನದಿಂದ ಕೂಡಿದ ಬಜೆಟ್ ಇದಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಸಿದ್ದರಾಮಯ್ಯ ಅವರು ಮಂಡಿಸಿರುವ 14ನೇ ಬಜೆಟ್​ನಲ್ಲಿ ಕೃಷಿ, ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಹಿಂದುಳಿದ ವರ್ಗಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿದೆ. ರಾಜಧಾನಿ ಬೆಂಗಳೂರಿಗೂ ದೊಡ್ಡ ಪ್ರಮಾಣದ ಬಜೆಟ್ ಮೀಸಲಿಡಲಾಗಿದೆ. ಆದರೆ, ಕೈಗಾರಿಕಾ ಅಭಿವೃದ್ಧಿ ಕಡೆಗಣನೆ ಮಾಡಲಾಗಿದೆ. ಉತ್ತರ ಕರ್ನಾಟಕದ ವಿಚಾರದಲ್ಲಿ ತಾರತಮ್ಯ ನೀತಿ
ಪ್ರವಾಸೋದ್ಯಮ ಬೆಳವಣಿಗೆಗೆ ನಿರೀಕ್ಷಿತ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗ್ಯಾರಂಟಿ ಯೋಜನೆ ಅನುಷ್ಠಾನದ ಜೊತೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ಬಜೆಟ್ ಮಂಡಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದಿದ್ದಾರೆ.

ಬೆಂಗಳೂರು ಬಿಟ್ಟರೆ ಅತೀ ವೇಗವಾಗಿ ಬೆಳೆಯುತ್ತಿರುವ ಹಾಗೂ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ನಗರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. ಇದರ ಜೊತೆಗೆ ಮಹಾನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆ ಆಗಿಲ್ಲ‌. ಹೀಗಾಗಿ ನೂತನ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಒತ್ತು ನೀಡಬೇಕು ಎಂಬ ಒತ್ತಾಯವೂ ಬಿಜೆಟ್​ ಮಂಡನೆಗೂ ಮುನ್ನ ಗುರುವಾರ ಕೇಳಿ ಬಂದಿದ್ದವು. ಆದರೇ ಬೆಟ್ಟದಷ್ಟು ನಿರೀಕ್ಷೆಗಳು ಬಾರಿ ಹುಸಿಯಾಗಿವೆ ಈ ಬಾರಿ ಕೂಡ ಸಿಲಿಕಾನ್​ ಸಿಟಿ ಅಭಿವೃದ್ದಿಗೆ ಹೆಚ್ಚು ಅನುದಾನವನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ.

ಇದನ್ನೂ ಓದಿ : ರಾಜ್ಯ ಬಜೆಟ್: ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ ಅವಳಿ‌ ನಗರದ‌ ಮಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.