ಹುಬ್ಬಳ್ಳಿ : ಕೊರೊನಾ ಆವರಿಸಿಕೊಂಡ ಬಳಿಕ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟ ಒಂದೊಂದಾಗಿ ಪುನಾರಂಭಗೊಳ್ಳುತ್ತಿವೆ. ಈ ನಡುವೆ ಸೆಪ್ಟೆಂಬರ್ 19 ರಿಂದ ಹುಬ್ಬಳ್ಳಿ- ಮುಂಬೈ ನಡುವೆ ಹೊಸ ವಿಮಾನ ಸೇವೆ ಪ್ರಾರಂಭಿಸಲು ಇಂಡಿಗೋ ಸಂಸ್ಥೆ ಮುಂದಾಗಿದೆ.
ಇದೇ ಮೊದಲ ಬಾರಿಗೆ ಸೆಪ್ಟೆಂಬರ್ 19 ರಿಂದ ವಾರದಲ್ಲಿ ಮೂರು ದಿನ ಹುಬ್ಬಳ್ಳಿ- ಮುಂಬೈ ನಡುವೆ ವಿಮಾನ ಸೇವೆ ಆರಂಭಿಸಲು ಇಂಡಿಗೋ ನಿರ್ಧರಿಸಿದೆ. ಪ್ರತೀ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 6.35 ಕ್ಕೆ ಮುಂಬೈನಿಂದ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಇಲ್ಲಿಂದ 8.40 ಕ್ಕೆ ಹೊರಟು 10.05 ಕ್ಕೆ ಮುಂಬೈ ತಲುಪಲಿದೆ.
ಇಂಡಿಗೋ ಸಂಸ್ಥೆ ಈಗಾಗಲೇ ಅಹಮದಾಬಾದ್, ಕಣ್ಣೂರು, ಚೆನ್ನೈ, ಕೊಚ್ಚಿ ಮತ್ತು ಬೆಂಗಳೂರು ನಗರಗಳಿಗೆ ವಿಮಾನ ಸೇವೆ ಹೊಂದಿದೆ. ಹುಬ್ಬಳ್ಳಿಯಿಂದ ಮುಂಬೈಗೆ ಮೊದಲ ಬಾರಿಗೆ ನೇರ ವಿಮಾನ ಸೇವೆ ಆರಂಭಿಸಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.