ETV Bharat / state

ಜನಸೇವೆಯ ಜೊತೆಗೆ ಸಾಂಪ್ರದಾಯಿಕತೆಗೆ ಒತ್ತು: ನೈರುತ್ಯ ರೈಲ್ವೆ ವಲಯದಲ್ಲಿ ಮಹತ್ವದ ಕಾರ್ಯ...! - kannada top news

ಭಾರತೀಯ ರೈಲ್ವೆ ಸಚಿವಾಲಯದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆ ಅಡಿ ನೈರುತ್ಯ ರೈಲ್ವೆ ವಿಭಾಗವು ಸ್ಥಳೀಯವಾಗಿ ತಯಾರಿಸಿದ ಕಲಾಕೃತಿಗಳ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿದೆ.

important-task-in-the-south-western-railway-sector
ಜನಸೇವೆಯ ಜೊತೆಗೆ ಸಾಂಪ್ರದಾಯಿಕತೆಗೆ ಒತ್ತು: ನೈರುತ್ಯ ರೈಲ್ವೆ ವಲಯದಲ್ಲಿ ಮಹತ್ವದ ಕಾರ್ಯ...!
author img

By

Published : May 17, 2023, 8:42 PM IST

ಹುಬ್ಬಳ್ಳಿ: ಜನರಿಗೆ ಗುಣಮಟ್ಟದ ಸಾರಿಗೆ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದಿರುವ ನೈರುತ್ಯ ರೈಲ್ವೆ ಈಗ ದೇಶದ ಸಾಂಪ್ರದಾಯಿಕತೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆ ಸಚಿವಾಲಯದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯನ್ನು 'ವೋಕಲ್‌ ಫಾರ್‌ ಲೋಕಲ್‌' ಎಂಬ ದೃಷ್ಟಿಕೋನದಿಂದ ಪ್ರಾರಂಭಿಸಿದೆ.

ಜನಸೇವೆಯ ಜೊತೆಗೆ ಸಾಂಪ್ರದಾಯಿಕತೆಗೆ ಒತ್ತು: ನೈರುತ್ಯ ರೈಲ್ವೆ ವಲಯದಲ್ಲಿ ಮಹತ್ವದ ಕಾರ್ಯ...!
ಜನಸೇವೆಯ ಜೊತೆಗೆ ಸಾಂಪ್ರದಾಯಿಕತೆಗೆ ಒತ್ತು: ನೈರುತ್ಯ ರೈಲ್ವೆ ವಲಯದಲ್ಲಿ ಮಹತ್ವದ ಕಾರ್ಯ...!

ಸ್ಥಳೀಯರೇ ತಯಾರಿಸಿದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸುವುದು ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಸ್ವಾವಲಂಬನೆಗೆ ಅವಕಾಶ ನೀಡುವ ಮೂಲಕ ಅವರನ್ನು ಉತ್ತೇಜಿಸುವಂತೆ ಮಾಡುವುದು. ಈ ಯೋಜನೆಯಡಿ ಸ್ಥಳೀಯರಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಹೆಚ್ಚಿನ ಪ್ರಚಾರವನ್ನು ನೀಡುವ ಉದ್ದೇಶದಿಂದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ. ಇದರಿಂದ ಸಾಂಪ್ರದಾಯಿಕತೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ.

ಇನ್ನೂ ಈ ಯೋಜನೆಗೆ ಮಾರ್ಚ್ 25, 2022 ರಂದು ಚಾಲನೆ ನೀಡಲಾಯಿತು. ಪ್ರಸ್ತುತ ಮೇ 01, 2023ಕ್ಕೆ 728 ನಿಲ್ದಾಣ, 21 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 785 ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ 'ಒಂದು ನಿಲ್ದಾಣ ಒಂದು ಉತ್ಪನ್ನ' ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳ ಮತ್ತು ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗಿದೆ. ರಾಷ್ಟ್ರದೆಲ್ಲೆಡೆ ಏಕರೂಪದ ಆಕರ್ಷಕವಾದ ವಿನ್ಯಾಸವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್‌ ಅವರು ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 21 ಮಳಿಗೆಗಳು ವಿವಿಧ ರೈಲು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 'ಒಂದು ನಿಲ್ದಾಣ ಒಂದು ಉತ್ಪನ್ನ' ಎಂಬುದು ಬುಡಕಟ್ಟು ಜನಾಂಗದವರು ಸ್ಥಳೀಯವಾಗಿ ತಯಾರಿಸಿದ ಕಲಾಕೃತಿಗಳು, ನೇಕಾರಿಕೆಯಿಂದ ತಯಾರಿಸಿದ ಕೈಮಗ್ಗಗಳು, ಕರಕುಶಲ ವಸ್ತುಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ: ಜಾತಿಗಣತಿ ತಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಸಂಜಯ್ ಕರೋಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.