ETV Bharat / state

ವಿದ್ಯಾರ್ಥಿಗಳಿಗೆ ವಿತರಿಸುವ ದಿನಸಿ ಕಿಟ್​ನಲ್ಲಿ ಅಕ್ರಮ.. ಕೈ ಮುಖಂಡ ಉಳ್ಳಾಗಡ್ಡಿಮಠ ಆರೋಪ

6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ಪ್ರತಿ ವಿದ್ಯಾರ್ಥಿಗೆ 4.50 ಕೆಜಿ ಅಕ್ಕಿ, 1.50 ಕೆಜಿ ಗೋಧಿ, 3.50 ಕೆಜಿ ಬೇಳೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ..

author img

By

Published : Sep 1, 2020, 8:19 PM IST

Illegal distribution of grocery kit in hubbali govt school
ವಿದ್ಯಾರ್ಥಿಗಳಿಗೆ ವಿತರಿಸುವ ದಿನಸಿ ಕಿಟ್​ನಲ್ಲಿ ಅಕ್ರಮ ಆರೋಪ

ಹುಬ್ಬಳ್ಳಿ: ಬಿಸಿಯೂಟದ ಬದಲಿಗೆ ನೀಡಬೇಕಿರುವ ದಿನಸಿ ಕಿಟ್​ ವಿತರಣೆಯಲ್ಲಿ ಅಕ್ರಮ ನಡೆದಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌​ ಶೆಟ್ಟರ್​ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಆಗ್ರಹಿಸಿದರು.

ಕೊರೊನಾ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಸರ್ಕಾರಿ‌ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ದಿನಸಿ ಕಿಟ್ ವಿತರಿಸಲು ಸರ್ಕಾರ ಆದೇಶ ನೀಡಿತ್ತು. ನಗರದ ಬೈರಿದೇವರಕೊಪ್ಪದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿ, ಗೋಧಿ, ಬೇಳೆಯಲ್ಲಿ ಅಂದಾಜು 200ರಿಂದ 300 ಗ್ರಾಂ ಕಡಿಮೆ ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ.

6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ಪ್ರತಿ ವಿದ್ಯಾರ್ಥಿಗೆ 4.50 ಕೆಜಿ ಅಕ್ಕಿ, 1.50 ಕೆಜಿ ಗೋಧಿ, 3.50 ಕೆಜಿ ಬೇಳೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಈ ಆದೇಶ ಹೊರಡಿಸಿದೆ. ಅದರಲ್ಲಿಯೂ ಅವ್ಯವಹಾರ ನಡೆಸಿರುವುದು ಖಂಡನೀಯ. ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ‌ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.