ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಅವರ ಪಕ್ಷಕ್ಕೆ ಪಿಎಫ್‌ಐ ಬ್ಯಾನ್ ಮಾಡಿದ್ದರಿಂದ ಕುದಿಯುತ್ತಿದೆ. ಪಿಎಫ್‌ಐ ಬ್ಯಾನ್ ಆಗಿದ್ದನ್ನು ಅವರಿಂದ ವಿರೋಧ ಮಾಡಲಿಕ್ಕೆ ಆಗುತ್ತಿಲ್ಲ. ಒಂದು ವೇಳೆ ವಿರೋಧ ಮಾಡಿದರೆ ಜನ ಒದೆಯುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಪಿಎಫ್‌ಐ ಬ್ಯಾನ್ ಮಾಡಿದ್ದನ್ನು ಸಹಿಸಲಾಗದೇ, ಈಗ ಆರ್‌ಎಸ್‌ಎಸ್ ಜೊತೆ ಲಿಂಕ್ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂದರೆ ನಾವೇ ಆರ್‌ಎಸ್‌ಎಸ್, ದೇಶದ ಪ್ರಧಾನಿ ಮೋದಿ ಕೂಡ ಆರ್‌ಎಸ್‌ಎಸ್‌ನಿಂದ ಬಂದವರು. ನಮ್ಮ ನಿಲುವನ್ನು ಕಾಂಗ್ರೆಸ್‌ಗೆ ವಿರೋಧ ಮಾಡಲಿಕ್ಕೆ ಆಗುತ್ತಿಲ್ಲ, ಯಾಕಂದ್ರೆ ಪಿಎಫ್ಐಗೆ ಸಾಕ್ಷಿಗಳಿವೆ ಎಂದರು.
ಇದರಿಂದಾಗಿ ಅವರಿಗೆ ಸಪೋರ್ಟ್ ಮಾಡುವ ರೀತಿಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎನ್ನುತ್ತಿದ್ದಾರೆ. ಸಿದ್ದರಾಮಯ್ಯಗೆ ಪಿಎಫ್‌ಐ ಮೇಲೆ ಪ್ರೀತಿ ಇದೆ. ಸಿದ್ದರಾಮಯ್ಯ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ನಾವು ಈ ದೇಶದ ಯಾವುದೇ ಸಮುದಾಯವನ್ನು ಮತಗಳ ಬ್ಯಾಂಕ್ ಎಂದು ನೋಡಿಲ್ಲ. ನಾವು ಎಂದೂ ಈ ದೇಶದಲ್ಲಿರುವ ಎಲ್ಲ ಅಲ್ಪಸಂಖ್ಯಾತರು ಕೆಟ್ಟವರು ಎಂದು ಹೇಳಿಲ್ಲ. ಯಾರು ಉಗ್ರವಾದಿ ಚುಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೋ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರು ಮತಗಳ ಬ್ಯಾಂಕ್ ಪಾಲಿಟಿಕ್ಸ್ ಭಯದಿಂದಾಗಿ ಆರ್‌ಎಸ್‌ಎಸ್ ವಿರೋಧ ಮಾಡಬೇಕು ಎನ್ನುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಹಿಂದೂಗಳ ವೋಟ್ ಬೇಡ ಅಂತಾ ಹೇಳಲಿ ನೋಡೋಣ: ಮಾಜಿ ಸಿಎಂಗೆ ಈಶ್ವರಪ್ಪ ಸವಾಲು