ಹುಬ್ಬಳ್ಳಿ: ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಅಸಮಾಧಾನವಿದೆ ನಿಜ. ಮೈತ್ರಿ ಸರ್ಕಾರ ಆಗಿದ್ದರಿಂದ ಅವರ ಜೊತೆ ಮಾತನಾಡುತ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅವರ ಜೊತೆ ಕೂತು ಮಾತಾಡುತ್ತೇವೆ. ಈ ಬಗ್ಗೆ ಡಿಸಿಎಂ ಪರಮೇಶ್ವರ್ ಜೊತೆ ಮಾತಾಡಿದ್ದೀನಿ. ಅಸಮಾಧಾನ ಎಲ್ಲವೂ ಬಗೆಹರಿಯುತ್ತದೆ. ಶಿಸ್ತು ಎಲ್ಲರಿಗೂ ಮುಖ್ಯ. ಶಿಸ್ತು ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಚಿವ ಶಿವಳ್ಳಿ ಜನಪ್ರಿಯ ಮತ್ತು ಹಿಂದುಳಿದವರ ನಾಯಕರಾಗಿದ್ದರು. ಚಿಕಿತ್ಸೆಗೆ ಎಂದು ಬೆಂಗಳೂರಿಗೆ ಬರುತ್ತಿದ್ದ ಕ್ಷೇತ್ರದ ಬಡವರಿಗೆ ಅವರೇ ಸ್ವಂತ ಹಣ ಕೊಟ್ಟು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಶಿವಳ್ಳಿಯವರಿಗಿದ್ದ ಬಡವರ ಪರ ಕಾರ್ಯವನ್ನು ಮೆಲಕು ಹಾಕಿದರು ದಿನೇಶ್ ಗುಂಡುರಾವ್.