ಧಾರವಾಡ: ಸರ್ಕಾರ ನೀಡುವ ಅಲ್ಪ ಮೊತ್ತದ ಪರಿಹಾರ ಬೇಡ ಎನ್ನಿ, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೋಡದೇ ಹೋದ್ರೆ ನಾನೇ ನನ್ನ ಜಮೀನು ಮಾರಿ ಪರಿಹಾರ ನೀಡುವೆ ಎಂದು ಧಾರವಾಡ ಶಾಸಕ ಅಮೃತ ದೇಸಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಎರಡು ದಿನಗಳಲ್ಲಿ ಪರಿಹಾರದ ಹಣ ನಿಮ್ಮ ಮನೆಗೆ ತಲುಪುತ್ತದೆ. ಯಾರೂ ಧೃತಿಗೇಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಮೃತ ದೇಸಾಯಿ ಭರವಸೆ ನೀಡಿದ್ದಾರೆ.
ಮಳೆಯ ಪ್ರವಾಹದಿಂದ ಮನೆ ಹಾನಿಯಾದ ಪ್ರದೇಶಗಳ ವೀಕ್ಷಣೆ ನಂತರ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಮಾತನಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.