ETV Bharat / state

ನನಗೆ ಜೀವ ಭಯವಿದೆ - ರಕ್ಷಣೆ ಕೋರಿದರೂ ನನಗೆ ಸರ್ಕಾರ ರಕ್ಷಣೆ ನೀಡಿಲ್ಲ: ದಿಂಗಾಲೇಶ್ವರ ಶ್ರೀ

ನನಗೆ ಜೀವ ಭಯವಿದೆ. ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ. ರಕ್ಷಣೆ ಕೊಡಿ ಎಂದು ಹಲವು ಸಲ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೂ ಸರ್ಕಾರ ರಕ್ಷಣೆ ನೀಡಿಲ್ಲ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.

Dingaleshwara Shri
ದಿಂಗಾಲೇಶ್ವರ ಶ್ರೀ
author img

By

Published : Dec 26, 2020, 3:02 PM IST

Updated : Dec 26, 2020, 3:22 PM IST

ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿ ವಿಚಾರದಲ್ಲಿ ನೀವು ಹೆಚ್ಚಿಗೆ ಮಾತನಾಡಿದ್ರೆ ನಿಮ್ಮನ್ನು ಬಿಡುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್ ಸಿಡಿಸಿದ್ದಾರೆ.

ನನಗೆ ಜೀವ ಭಯವಿದೆ - ರಕ್ಷಣೆ ಕೋರಿದರೂ ನನಗೆ ಸರ್ಕಾರ ರಕ್ಷಣೆ ನೀಡಿಲ್ಲ: ದಿಂಗಾಲೇಶ್ವರ ಶ್ರೀ

ನಗರದಲ್ಲಿಂದು ಮೂರು ಸಾವಿರ ಮಠದ ಆಸ್ತಿ ಪರಭಾರೆ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ನನಗೆ ಜೀವ ಭಯವಿದೆ. ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ. ರಕ್ಷಣೆ ಕೊಡಿ ಎಂದು ಹಲವು ಸಲ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೂ ಸರ್ಕಾರ ರಕ್ಷಣೆ ನೀಡಿಲ್ಲ ಎಂದರು.

ನಾನು ಮೂರು ಸಾವಿರ ಮಠದ ಭಕ್ತ, ಮಠದ ಶಿಷ್ಯ. ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ಮಠದ ಆಸ್ತಿ ಉಳಿಯಬೇಕು. ಗೃಹ ಮಂತ್ರಿಗಳೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಮ್ಮನ್ನ ಹತ್ತಿಕ್ಕಬಹುದು, ಈ ಹಿಂದೆ 7 ಬಾರಿ ಕಾರು ಅಪಘಾತ ಮಾಡ್ತಾರೆ, ನನ್ನ ಕಾರಿಗೆ ಬೆಂಕಿ ಹಚ್ಚುತ್ತಾರೆ ನಾನು ಜಗ್ಗುವುದಿಲ್ಲ. ನಾನು ಮೊನ್ನೆ ಡಿ. 24 ರಂದು ಹುಬ್ಬಳ್ಳಿಯಿಂದ ಹೋಗುವಾಗ ನನ್ನ ಕಾರಿಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ. ಕಾರು ನಿಲ್ಲಿಸಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಕುಂದಗೋಳ ರಸ್ತೆಯ ಮಾರ್ಗದಲ್ಲಿ ಹೋಗುವಾಗ ನನಗೆ ಅಟ್ಯಾಕ್ ಮಾಡಲು ಮುಂದಾಗಿದ್ದರು. ಈ‌ ಹೋರಾಟವನ್ನ ಕೈ ಬಿಡಿ ಎಂದು ಒತ್ತಡ ಹಾಕಿದ್ದಾರೆ ಎಂದರು.

ಮಠದ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡಬಾರದು ಎಂದು ಕೋರ್ಟ್ ಆದೇಶದವಿದ್ದರೂ 500 ಕೋಟಿ ಬೆಲೆ ಬಾಳುವ 25 ಎಕರೆ ಜಮೀನು ಕೊಡಲಾಗಿದೆ. ಮೂರು ಸಾವಿರ ಮಠ ತಾವೇ ಖುದ್ದಾಗಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಿದ್ದರೆ ನಾನು ಪ್ರಶ್ನೆ ಮಾಡ್ತಾ ಇರಲಿಲ್ಲ. ಮೂರು ಸಾವಿರ ಮಠದಿಂದ ಉಚಿತ ಸೇವೆ ನಡೆಯಲಿ. ‌ಆದರೆ, ಕೆಎಲ್​ಇ ಸಂಸ್ಥೆಗೆ ನೀಡಿದ್ದು ಕಾನೂನು ಬಾಹಿರ ಎಂದರು.

ಮಠದ ಉನ್ನತ ಸಮಿತಿ ‌ಮಾಡಿದ್ದು, ಗದಗದ ತೋಂಟದಾರ್ಯ ಮಠದ ಲಿಂಗೈಕ್ಯ ಸ್ವಾಮೀಜಿಗಳ ಕೆಲಸದಿಂದ ಮೂರು ಸಾವಿರ ಮಠ ನಾಶವಾಗುತ್ತಿದೆ. ಮೂರು ಸಾವಿರ ಮಠದ ಆಸ್ತಿಯಲ್ಲಿ ಆಸ್ಪತ್ರೆ ಕಟ್ಟೋದು ಬೇಡ ಎಂದಿದ್ದೆ. ಹುಬ್ಬಳ್ಳಿಗೆ ವೈದ್ಯಕೀಯ ವಿದ್ಯಾಲಯ ಆಗುವುದು ನನಗೂ ಸಂತಸ ಇದೆ. ಮೂರು ಸಾವಿರ ಮಠ ಶಕ್ತಿಹೀನ ಆಗಬಾರದು ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

17 -07- 2009 ರಲ್ಲಿ ‌ಒಂದು ಪತ್ರ ಸಿದ್ದತೆ ಆಗುತ್ತದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಿತ್ತದೋಷ ಮುಖರ್ಜಿ ಅವರನ್ನ ಸುಪ್ರೀಂಕೋರ್ಟ್ ನೇಮಕ ಮಾಡುತ್ತದೆ. ಅವರ ಪತ್ರದಲ್ಲಿ ಮಠದ ಆಸ್ತಿಯನ್ನ ಯಾರೂ ಪರಭಾರೆ ಮಾಡಬಾರದು ಎಂದು ಹೇಳಿದೆ. ಈ ಒಂದು ಆದೇಶವನ್ನ ತಿದ್ದುಪಡಿ ಮಾಡಲಾಗಿದೆ. ಧಾರವಾಡದಲ್ಲಿ ಈ ಆದೇಶವನ್ನ ತಿದ್ದುಪಡಿ ಮಾಡಲಾಗಿದೆ. ಮೂರು ಸಾವಿರ ಮಠದ ಆಸ್ತಿಯನ್ನ ನುಂಗಲು ಹೊರಟಿದ್ದಾರೆ. ನಿವೃತ್ತ ನ್ಯಾಯಾಧೀಶ ಸಿ.ವೈ. ಭರಮಗೌಡ ಮಠದ ಆಸ್ತಿ ವಿಚಾರದ ಆರ್ಬಿಟೇಟರ್ ನ್ಯಾಯಾಧೀಶರಾಗಿದ್ದರು. ಇವರು ಆಸ್ತಿಯನ್ನ ಪರಭಾರೆ ಮಾಡಬಹುದು ಎಂದು 2012 ರಲ್ಲಿ ಆದೇಶ ಮಾಡಿದ್ದಾರೆ. ಈ ಭಾಗದ ಕೆಲವು ಜನ ಪ್ರತಿನಿಧಿಗಳಿಗೆ ಮೂರು ಸಾವಿರ ಮಠದ ಮೇಲೆ ಕಾಳಜಿ ಇಲ್ಲ ಎಂದರು.

ಇನ್ನು ಮಲ್ಲಿಕಾರ್ಜುನ ಎನ್.ಎಚ್. ಎನ್ನುವವರಿಗೆ ಕೇಶ್ವಾಪುರದ 2 ಎಕರೆ ಜಮೀನನ್ನ ಮಾರಾಟ ಮಾಡಲಾಗಿದೆ. ಮಠಕ್ಕೆ ಹಣದ ಅವಶ್ಯಕತೆ ಇರುವುದರಿಂದ 10 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಖರೀದಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಠಕ್ಕೆ ಹಣದ ಸಮಸ್ಯೆ ಇದ್ದರೆ, 25 ಎಕರೆ ಜಮೀನನ್ನ ದಾನ‌ ಮಾಡುವುದು ಸರಿಯೇ. ದಾನ ಮಾಡಿದ್ದು ಸರಿ ಆದ್ರೆ, ದಾನ ಯಾರಿಗೆ ಮಾಡಬೇಕು.

ಸಮರ್ಥರಿಗೆ ದಾನ ಮಾಡಬಾರದು, ಹುಬ್ಬಳ್ಳಿ ತುಂಬಾ ಆಸ್ತಿ ಹೊಂದಿರುವವರಿಗೆ ಆಸ್ತಿ ದಾನ ಮಾಡಿದ್ದು ಏಕೆ. ಮೂರು ಸಾವಿರ ಮಠದ ಆಸ್ತಿಗಾಗಿ ನಾನು ಯಾವತ್ತೂ ಸುಮ್ಮನೆ ಕುಳಿತಿಲ್ಲ. ಮೂರು ಸಾವಿರ ಮಠಕ್ಕೆ ಕೇವಲ 33 ಎಕರೆ ಜಮೀನು ಇದೆ. ಕೆಎಲ್‌ಇ ಸಂಸ್ಥೆ ಬೆಳೆಯಲಿ, ಮೂರು ಸಾವಿರ ಮಠ ಅವನತಿಗೆ ಹೋಗಬಾರದು. 1 ಕೋಟಿ 25 ಲಕ್ಷ ರೂಗಳನ್ನ ಮೂರು ಸಾವಿರ ಮಠದ ನ್ಯಾಯ ಬಗೆಹರಿಸಲು ಮಠದ ಭಕ್ತರಿಂದ ತಂದಿದ್ದೇನೆ. ಈ ಮಠದಲ್ಲಿ ಈಗ ಆಡಳಿತ ಮಾಡುವವರಿಗೆ ಆವಾಗ 10 ಲಕ್ಷ ಕೊಡಲು ಆಗಲಿಲ್ಲ. ಮೂರು ಸಾವಿರ ಮಠದ ಆಡಳಿತ ಮಂಡಳಿಯವರ ಅಪ್ಪನ ಆಸ್ತಿ ಇರಲಿಲ್ಲ ಏನೂ..? ಮೂರು ಸಾವಿರ ಮಠದ ಆಸ್ತಿ ಬೇರೆಯವರಿಗೆ ಕೊಡಲು ಇವರು ಯಾರು..? ನಿಮ್ಮ ಆಸ್ತಿ ಕೊಡಿ, ಮಠದ ಆಸ್ತಿ ಮಠಕ್ಕೆ ಬಿಡಿ ಎಂದು‌ ಮಠದ ಉನ್ನತ ಸಮಿತಿ ಸದಸ್ಯರಿಗೆ ಸವಾಲು ಹಾಕಿದರು.

Last Updated : Dec 26, 2020, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.