ಧಾರವಾಡ: ನವೀನ್ ಪಾರ್ಥಿವ ಶರೀರದ ಬಗ್ಗೆ ಅರವಿಂದ ಬೆಲ್ಲದ್ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದು, ನಾನು ಅವರ ಹೇಳಿಕೆಯನ್ನು ಗಮನಿಸಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಶಬ್ದ ಬಳಸಬೇಕು ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷವೇ ಇರಲಿ, ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಇದೊಂದು ಕುಟುಂಬಕ್ಕೆ ಆಘಾತವಾಗಿರೋ ಸಂಗತಿಯಾಗಿದ್ದು ಯಾವ ತಪ್ಪು ಮಾಡದೇ ಆತ ಜೀವ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ: ಸುನೀಲ್ ಕುಮಾರ್
ಕಲಿಯಲು ಹೋದ ಮಗುವನ್ನು ನಾವು ಕಳೆದುಕೊಂಡಿದ್ದೇವೆ, ಆತ ದೇಶ ದ್ರೋಹದ ಕೆಲಸ ಮಾಡಿಲ್ಲ. ದೇಶಕ್ಕಾಗಿಯೂ ಪ್ರಾಣತ್ಯಾಗ ಮಾಡಿಲ್ಲ. ಕೇವಲ ಔಷಧ, ತಿಂಡಿ ತರಲು ಹೊರ ಹೋಗಿದ್ದಾಗ ಮಗು ಪ್ರಾಣ ಕಳೆದುಕೊಂಡಿದೆ. ಇಂತಹ ವಿಚಾರದಲ್ಲಿ ವಿವಾದದ ಪದ ಬಳಸಬೇಡಿ. ಅವರು ಯಾವ ಅರ್ಥಕ್ಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದರು.