ETV Bharat / state

ಗುರುವಿನ ದರ್ಶನಕ್ಕೆ ಬಂದಿದ್ದೇನೆ, ಇದರಲ್ಲಿ ವಿಶೇಷತೆಯಿಲ್ಲ: ದಿಂಗಾಲೇಶ್ವರ ಸ್ವಾಮೀಜಿ - ಮೂರುಸಾವಿರ ಮಠಕ್ಕೆ ಭೇಟಿ

ನಾನು ಮೂರುಸಾವಿರ ಮಠಕ್ಕೆ ಬರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಗುರುವಿನ ದರ್ಶನಕ್ಕಾಗಿ ಹಾಗೂ ಇದೇ 23 ರಂದು ಸತ್ಯ ದರ್ಶನ ಎಂಬ ಸಭೆಯನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಗುರುಗಳನ್ನು ಆಹ್ವಾನಿಸಲು ಬಂದಿದ್ದೇನೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.

Dingaleswara Swamiji
ದಿಂಗಾಲೇಶ್ವರ ಸ್ವಾಮೀಜಿ
author img

By

Published : Feb 20, 2020, 5:25 PM IST

ಹುಬ್ಬಳ್ಳಿ: ಗುರುವಿನ ದರ್ಶನಕ್ಕೆ ಬಂದಿದ್ದೇನೆ. ನಾನು ಮೂರುಸಾವಿರ ಮಠಕ್ಕೆ ಬರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾನು ಕೂಡ ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ರು.

ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ. 23 ರಂದು ಸತ್ಯದರ್ಶನ ಎಂಬ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಗುರುಗಳನ್ನು ಆಹ್ವಾನಿಸಲು ಬಂದಿದ್ದೇನೆ ಎಂದರು.

ಗುರುಗಳು ವಿಶ್ರಾಂತಿಯಲ್ಲಿದ್ದಾರೆ. ಅವರು ವಿಶ್ರಾಂತಿಯಲ್ಲಿದ್ದಾಗ ಭಂಗ ತರುವುದು ಸರಿಯಲ್ಲ. ಹೀಗಾಗಿ ಗುರುಗಳ ವಿಶ್ರಾಂತಿ ಬಳಿಕ ಅವರಿಗೆ ಸನ್ಮಾನಿಸಿ ಆಮಂತ್ರಣ ನೀಡಲಾಗುತ್ತದೆ ಎಂದರು. ಗುರುಗಳಿಗೆ ಒಂದು ಪತ್ರವನ್ನು ತಂದಿದ್ದೇನೆ ಆ ಪತ್ರವನ್ನು ಕೊಟ್ಟು ಆಮಂತ್ರಿಸುತ್ತೇನೆ ಎಂದ ಸ್ವಾಮೀಜಿ, ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡುವುದಿಲ್ಲ. ಸಭೆಯನ್ನು ಇದೆ ಮೊದಲ ಬಾರಿಗೆ ಕರಿಯುತ್ತಿಲ್ಲ ಎಂದು ಸಮಜಾಯಿಸಿ ನೀಡಿದ್ರು.

ಮೂರು ಸಾವಿರ ಮಠಕ್ಕೆ ಗುರುವಿನ ದರ್ಶನಕ್ಕೆ ಬಂದಿದ್ದೇನೆ- ದಿಂಗಾಲೇಶ್ವರ ಸ್ವಾಮೀಜಿ

ಇದರಲ್ಲಿ ಏನು ಕೂಡ ವಿಶೇಷತೆಯಿಲ್ಲ. ನಾನು ರಾಜ್ಯಾದ್ಯಂತ ಹಲವು ಮಠಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇನೆ. ಅದರಂತೆ ಇದೇ 23ರಂದು ಸಭೆಯನ್ನು ಆಯೋಜಿಸಲಾಗಿದೆ. ಯಾವುದೇ ಪ್ರಶ್ನೆಗೆ ಈಗ ಉತ್ತರಿಸುವುದಿಲ್ಲ. ಎಲ್ಲ ಪ್ರಶ್ನೆಗಳಿಗೆ ಸತ್ಯ ದರ್ಶನ ಸಭೆಯಲ್ಲಿ ಉತ್ತರಿಸುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.