ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಅವಳಿನಗರದಲ್ಲಿ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗ್ತಿದೆ.
ನಗರದ ವಲಯ ಸಂಖ್ಯೆ 8ರ ವಾರ್ಡ್ ನಂ. 52ರಲ್ಲಿನ ಸಿಬಿಟಿ, ಕೋಳಿಪೇಟೆ, ಕಿಲ್ಲಾ ಓಣಿ ಸೇರಿ ಮುಂತಾದ ಕಡೆಗಳಲ್ಲಿ ದ್ರಾವಣ ಸಿಂಪಡಣೆ ಮಾಡಲಾಯಿತು. ಈಗಾಗಲೇ ಜನ ಸಂಚಾರ ಸಂಪೂರ್ಣ ಹಿಡಿತಕ್ಕೆ ಬಂದಿದೆ. ಈಗ ಮಹಾನಗರ ಪಾಲಿಕೆ ತನ್ನ ಸ್ವಚ್ಛತಾ ಕಾರ್ಯಾಚರಣೆ ಚುರುಕುಗೊಳಿಸಿದೆ.