ETV Bharat / state

ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆ ಮುಂದೆ ಕೈ ನಾಯಕರ ಹೈಡ್ರಾಮ: ಸೀಟ್ ಇಲ್ಲವೆಂದು ಸಿಟ್ಟಾದ ಸದಸ್ಯರು - ಕಾಂಗ್ರೆಸ್​ನ ಪಾಲಿಕೆ ಸದಸ್ಯರು ಹೈಡ್ರಾಮ

ಪೌರ ಸನ್ಮಾನ ಕಾರ್ಯಕ್ರಮ ವೇದಿಕೆ ಮುಂಭಾಗ ಕಾಂಗ್ರೆಸ್​ನ ಪಾಲಿಕೆ ಸದಸ್ಯರು ಹೈಡ್ರಾಮ ಮಾಡಿದ್ದಾರೆ. ನಮಗೆ ಗೌರವ ಕೊಟ್ಟಿಲ್ಲ, ಅಲ್ಲದೇ ಕೂರಲು ಆಸನದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ್ದಾರೆ.

ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆ ಮುಂದೆ ಕೈ ನಾಯಕರ ಹೈಡ್ರಾಮ

author img

By

Published : Sep 26, 2022, 2:24 PM IST

ಹುಬ್ಬಳ್ಳಿ: ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಪಾಲಿಕೆ ಸದಸ್ಯರು ವೇದಿಕೆಯ ಮುಂದೆ ಹೈಡ್ರಾಮ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮದ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಪಾಲಿಕೆ ಸದಸ್ಯರು ಹೈಡ್ರಾಮ ಮಾಡಿದ್ದು,‌ ಪಾಲಿಕೆ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಅಸಮಾಧಾನ ಹೊರಹಾಕಿದ್ದಾರೆ.

ಪೌರ ಸನ್ಮಾನ ಕಾರ್ಯಕ್ರಮದಲ್ಲಿ ನಮಗೆ ಗೌರವ ಕೊಟ್ಟಿಲ್ಲ ಎಂದು ಕೈ ಸದಸ್ಯರು ಆರೋಪಿಸಿದ್ದಾರೆ. ನಮಗೆ ಆಸನದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ವೇದಿಕೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಸೀಟ್ ಇಲ್ಲವೆಂದು ಸಿಟ್ಟಾದ ಕಾಂಗ್ರೆಸ್​​ ಸದಸ್ಯರು

ನಿನ್ನೆ ತಡರಾತ್ರಿ ನಾವು ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಿದ್ದ ಕಾಂಗ್ರೆಸ್​ ಸದಸ್ಯರು, ಈಗ ಇಂತಹದೊಂದು ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ಬಿಜೆಪಿಗರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು: ಸಿಎಂ ಹಾಗೂ ಸಚಿವರಿಂದ ಅದ್ಧೂರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.