ಹುಬ್ಬಳ್ಳಿ: ನೂತನ ರಸ್ತೆ ನಿಯಮದ ಪರಿಣಾಮ ದಂಡಕ್ಕೆ ಹೆದರುವ ವಾಹನ ಸವಾರರು ಪೇಚಿಗೆ ಸಿಲುಕಿದ್ದು ಸತ್ಯ. ಇಲ್ಲೊಬ್ಬರು ಟ್ರಾಫಿಕ್ ಪೊಲೀಸರ ಉಸಾಬರಿ ಏಕೆ ಎಂದು ಟ್ರ್ಯಾಕ್ಟರ್ ಚಲಾಯಿಸುವಾಗಲೂ ಹೆಲ್ಮೆಟ್ ಧರಿಸಿದ್ದಾರೆ.
ನಗರದ ಗಬ್ಬೂರ ಕ್ರಾಸ್ ಬಳಿ ಹೆಲ್ಮೆಟ್ ಹಾಕಿಕೊಂಡು ಟ್ರ್ಯಾಕ್ಟರ್ ಚಲಾಯಿಸಿದ್ದು, ಇದನ್ನು ಗಮನಿಸಿದ ಕೆಲವರು ಅಚ್ಚರಿಯಿಂದ ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಇತ್ತೀಚೆಗೆ ಸೈಕಲ್ ಸವಾರನೊಬ್ಬ ಹೆಲ್ಮೆಟ್ ಹಾಕಿಕೊಂಡಿದ್ದು ಸವಾರಿ ಮಾಡಿರುವ ವಿಡಿಯೋ ಸುದ್ದಿಯಾಗಿತ್ತು. ಇದೀಗ ಟ್ರ್ಯಾಕ್ಟರ್ ಚಾಲಕರೊಬ್ಬರು ಶಿರಸ್ತ್ರಾಣ ಧರಿಸಿ ಸವಾರಿ ಮಾಡಿದ್ದು ಜನರಲ್ಲಿ ಕುತೂಹಲ ಉಂಟು ಮಾಡಿದೆ.