ಹುಬ್ಬಳ್ಳಿ: ಇಲ್ಲಿನ ಕೊಪ್ಪಿಕರ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕಿನೊಳಗೆ ನುಗ್ಗಿ ಕ್ಯಾಷಿಯರ್ಗೆ ಚಾಕು ತೋರಿಸಿ, ಹಣ ದೋಚಿ ಪರಾರಿಯಾಗುತ್ತಿದ್ದ ಖದೀಮನನ್ನು ಕೆಲವೇ ಕ್ಷಣಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಬ್ಯಾಗ್ನಲ್ಲಿ ಸುಮಾರು ₹7 ಲಕ್ಷಕ್ಕೂ ಹೆಚ್ಚು ಹಣವನ್ನ ತುಂಬಿಕೊಂಡಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹಾಡಹಗಲೇ ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಈಗ ಕಂಬಿ ಎಣಿಸುತ್ತಿದ್ದಾನೆ.
ವಿಜಯಪುರದ ಪ್ರವೀಣಕುಮಾರ ಅಪ್ಪಾಸಾಹೇಬ್ ಪಾಟೀಲ ಎಂಬ ವ್ಯಕ್ತಿ ಸಿಕ್ಕಿಬಿದ್ದಿರುವ ಆರೋಪಿ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಕಳೆದ ಎರಡು ದಿನದ ಹಿಂದೆ ಹುಬ್ಬಳ್ಳಿಗೆ ಬಂದು ಭಾರತಿ ಲಾಡ್ಜ್ನಲ್ಲಿ ತಂಗಿದ್ದ. ಇಂದು ಕೊಪ್ಪಿಕರ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕಿನೊಳಗೆ ನುಗ್ಗಿ ಕ್ಯಾಷಿಯರ್ಗೆ ಚಾಕು ತೋರಿಸಿ, ಬ್ಯಾಗಿನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣವನ್ನ ತುಂಬಿಕೊಂಡಿದ್ದ.
ತಕ್ಷಣವೇ ಪರಾರಿಯಾಗಲು ಯತ್ನಿಸಿದಾಗ, ಬ್ಯಾಂಕಿನ ಮಹಿಳಾ ಸಿಬ್ಬಂದಿ ಚೀರಾಡಿಕೊಂಡಿದ್ದಾರೆ. ಆಗ ಸ್ಥಳಕ್ಕಾಗಮಿಸಿದ ಕೊಪ್ಪಿಕರ್ ರಸ್ತೆಯ ಮೆಟ್ರೋ ಪೊಲೀಸ್ ಹೋಟೆಲ್ ಬಳಿ ಕರ್ತವ್ಯನಿರತ ದಕ್ಷಿಣ ಸಂಚಾರಿ ಠಾಣೆಯ ಪೊಲೀಸ್ ಉಮೇಶ್ ಹಾಗೂ ಉಪನಗರ ಠಾಣೆಯ ಕಾನ್ಸ್ಟೇಬಲ್ವೋರ್ವರು ಆರೋಪಿಯನ್ನ ಹಣದ ಸಮೇತ ಹಿಡಿದಿದ್ದಾರೆ.
ಎರಡೇ ದಿನದಲ್ಲಿ ಮದುವೆ ಆಗಬೇಕಿದ್ದವನ ಕೈಗೆ ಬಿತ್ತು ಕೋಳ.. ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರೋಪಿ ಪ್ರವೀಣನ ಮದುವೆ ಇನ್ನೆರಡು ದಿನದಲ್ಲಿ ವಿಜಯಪುರದಲ್ಲಿ ನಡೆಯುವುದಿತ್ತು ಎಂದು ತಿಳಿದುಬಂದಿದೆ.
ಟ್ರಾಫಿಕ್ ಪೊಲೀಸ್ಗೆ ಪೊಲೀಸ್ ಆಯುಕ್ತರ ಅಭಿನಂದೆ.. ಹಾಡಹಗಲೇ ನಡೆಯುತ್ತಿದ್ದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಸಫಲರಾದ ಟ್ರಾಫಿಕ್ ಪೊಲೀಸ್ ಉಮೇಶ ಅವರಿಗೆ ಪೊಲೀಸ್ ಆಯುಕ್ತ ಲಾಭೂರಾಮ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬಂಧನದ ವೇಳೆ ಅಶ್ಲೀಲ ವಿಡಿಯೋ ನೋಡ್ತಿದ್ದ ಆರೋಪಿ!