ಹುಬ್ಬಳ್ಳಿ: ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಲಾಕ್ಡೌನ್ ಘೋಷಣೆ ಮಾಡಿದರೂ ಸಹ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸ್ ಕಮೀಷನರ್ ಲಾಬೂರಾಮ್ ಅವರು ಸ್ವತಃ ಫೀಲ್ಡ್ಗಿಳಿದಿದ್ದಾರೆ. ಈ ವೇಳೆ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರ ಆರೋಗ್ಯ ಕಾಪಾಡಲು ಲಾಕ್ಡೌನ್ ಜಾರಿ ಮಾಡಿ ಯಾರೂ ಹೊರಬರದಂತೆ ಮನವಿ ಮಾಡಲಾಗಿದೆ. ಆದರೂ ಜನರು ವಿನಾಕಾರಣ ವಾಹನಗಳನ್ನು ರೋಡಿಗಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಫೀಲ್ಡಿಗಿಳಿದು ವಾಹನ ತಪಾಸಣೆಗೆ ಮುಂದಾದ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಡಿಸಿಪಿ ಕೆ.ರಾಮರಾಜನ್ ಅವರು ಅನಗತ್ಯವಾಗಿ ಓಡಾಡುತ್ತಿದ್ದ ಸವಾರರ ವಾಹನಗಳನ್ನು ಸೀಜ್ ಮಾಡಿ ಎಚ್ಚರಿಕೆ ನೀಡಿದರು.