ETV Bharat / state

ಲಾಕ್​ಡೌನ್ ಎಫೆಕ್ಟ್; ಸಂಕಷ್ಟದಲ್ಲಿ‌ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ವ್ಯಾಪಾರಸ್ಥರು - ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ವ್ಯಾಪಾರಸ್ಥರು

ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸಿರುವ ವ್ಯಾಪರಸ್ಥರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಸಮಸ್ಯೆ ಬಗೆಹರಿಸುವಂತೆ ಅಂಗಲಾಚುತ್ತಿದ್ದಾರೆ.

Hubli Old Bus Station
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ವ್ಯಾಪಾರಸ್ಥರು
author img

By

Published : Aug 7, 2020, 5:51 PM IST

ಹುಬ್ಬಳ್ಳಿ: ಕೊರೊನಾ ಎಫೆಕ್ಟ್ ನಿಂದ ಅಂಗಡಿಕಾರರು ಸಂಕಷ್ಟ ‌ಅನುಭವಿಸುವಂತಾಗಿದ್ದು, ಅದರಲ್ಲೂ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ಬಸ್ ನಿಲ್ದಾಣದಲ್ಲಿ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಮೇ.31 ರ ವರೆಗೆ ಬಾಡಿಗೆಯನ್ನು ಕಟ್ಟದಂತೆ ವಿನಾಯಿತಿ ನೀಡಲಾಗಿತ್ತು. ಈಗ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ಬಸ್ ಸಂಚಾರದ ಪ್ರಮಾಣ ತೀರಾ ಕಡಿಮೆಯಾಗಿದ್ದು, ಬಸ್ ನಿಲ್ದಾಣವನ್ನು ತೆರವುಗೊಳಿಸುವ ಹಿನ್ನೆಲೆ ವ್ಯಾಪಾರಸ್ಥರು ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ. ನಿಲ್ದಾಣ ತೆರವುಗೊಳಿಸುವುದು ವಿಳಂಬವಾದರೆ ಡಿಸೆಂಬರ್ ತಿಂಗಳವರೆಗೆ ಬಾಡಿಗೆ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಲಾಕ್​ಡೌನ್ ಸಂದರ್ಭದಲ್ಲಿ ಅಂಗಡಿಗಳಿಗೆ ಹಾಕಿದ ಬಂಡವಾಳ ಕೂಡ ನಷ್ಟವಾಗಿದ್ದು, ಅಂಗಡಿಯನ್ನು ಪ್ರಾರಂಭಿಸಲು ಕೂಡ ಸಂಕಷ್ಟ ಸ್ಥಿತಿ ಎದುರಾಗಿದೆ. ಆದ್ದರಿಂದ ಡಿಸೆಂಬರ್ ತಿಂಗಳವರೆಗೆ ಬಾಡಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.