ETV Bharat / state

ಕೊರೊನಾದಿಂದ ಅತಂತ್ರರಾದ ನಿರ್ಗತಿಕರು, ಭಿಕ್ಷುಕರು : ಮಹಾನಗರ ಪಾಲಿಕೆ ಮಾಡಿದ್ದೇನು?

ದೇಶಾದ್ಯಂತ ಲಾಕ್​ಡೌನ್ ಹಿನ್ನೆಲೆ ದೂರದ ಊರುಗಳಿಂದ ಕೆಲಸಕ್ಕೆಂದು ಆಗಮಿಸಿದವರು ಹಾಗೂ ನಿರ್ಗತಿಕರು, ಭಿಕ್ಷುಕರಿಗೆ ಮಹಾನಗರ ಪಾಲಿಕೆಯ ಗಾರ್ಡ್​ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.

Hubli Muncipal help to beggers
ಕೊರೊನಾದಿಂದ ಅತಂತ್ರರಾದ ನಿರ್ಗತಿಕರು, ಭಿಕ್ಷುಕರು
author img

By

Published : Mar 25, 2020, 4:54 PM IST

ಹುಬ್ಬಳ್ಳಿ : ಕೊರೊನಾ ವೈರಸ್ ಭೀತಿ‌ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಆದೇಶ ನೀಡಿದ್ದು ದೂರದ ಊರುಗಳಿಂದ ಕೆಲಸಕ್ಕೆಂದು ಆಗಮಿಸಿದವರು ಹಾಗೂ ನಿರ್ಗತಿಕರು, ಭಿಕ್ಷುಕರು ಅತಂತ್ರರಾಗಿದ್ದಾರೆ.

ಕೊರೊನಾದಿಂದ ಅತಂತ್ರರಾದ ನಿರ್ಗತಿಕರು, ಭಿಕ್ಷುಕರು

ದಿಕ್ಕು ತೋಚದೇ ಅಲ್ಲಲ್ಲಿ‌ ಅಲೆದಾಡುತ್ತಿದ್ದವರನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಒಂದೆಡೆ ಸೇರಿಸಿದ್ದಾರೆ. ಎಲ್ಲೆಡೆ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಎಲ್ಲಿಗೂ ಹೋಗದೆ ಪರದಾಡುತ್ತಿದ್ದ ಸುಮಾರು 46 ಜನರಿಗೆ ಮಹಾನಗರ ಪಾಲಿಕೆಯ ಗಾರ್ಡ್​ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಇದರಲ್ಲಿ 6 ಹೆಣ್ಣುಮಕ್ಕಳು, 40 ಪುರುಷರಿದ್ದಾರೆ. ರಾಜ್ಯದ ಬೇರೆ-ಬೇರೆ ಕಡೆಯಿಂದ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ಆದರೆ, ಎಲ್ಲೆಡೆ ಸಂಚಾರ ಬಂದ್ ಆದ ಹಿನ್ನೆಲೆ ‌ಇವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದವರು ಕೆಲಸದಿಂದ‌ ತೆಗೆದು ಹಾಕಿದ್ದು, ಪಾಲಿಕೆ‌ ಅಧಿಕಾರಿಗಳು ಇವರ ಕುರಿತು ‌ಮಾಹಿತಿ‌ ಕಲೆ ಹಾಕಿ ಅವರ ಗ್ರಾಮಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.