ETV Bharat / state

ಕೊಲ್ಲಾಪುರದಲ್ಲಿ ಹುಬ್ಬಳ್ಳಿ ವ್ಯಕ್ತಿ ಆತ್ಮಹತ್ಯೆ - ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಕೊಲ್ಲಾಪುರದ ಲಾಡ್ಜ್​​ವೊಂದರಲ್ಲಿ ಆತ್ಮಹತ್ಯೆಗೆ ಶರಣ ಪ್ರಕರಣ ಬೆಳಕಿಗೆ ಬಂದಿದೆ. ಅಯ್ಯಪ್ಪ ಮಾಲಾಧಾರಿಗಳಿಗೆ ಗುರುವಾಗಿದ್ದ ವೀರಾಪೂರ ಓಣಿಯ ನಿವಾಸಿ ರವಿ ಹೋತಪೇಟೆ ಆತ್ಮಹತ್ಯೆ ಮಾಡಿಕೊಂಡವರು.

Hubli
ಕೊಲ್ಲಾಪುರದಲ್ಲಿ ಹುಬ್ಬಳ್ಳಿ ವ್ಯಕ್ತಿ ಆತ್ಮಹತ್ಯೆ..
author img

By

Published : Feb 24, 2021, 12:35 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಕೊಲ್ಲಾಪುರಕ್ಕೆ ಹೋದ ಸಂದರ್ಭದಲ್ಲಿ ಲಾಡ್ಜ್​​ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಅಯ್ಯಪ್ಪ ಮಾಲಾಧಾರಿಗಳಿಗೆ ಗುರುವಾಗಿದ್ದ ವೀರಾಪೂರ ಓಣಿಯ ನಿವಾಸಿ ರವಿ ಹೋತಪೇಟೆ ಆತ್ಮಹತ್ಯೆ ಮಾಡಿಕೊಂಡವರು. ಇವರು ಗೊಂಬೆಗಳಿಗೆ ಆಭರಣಗಳನ್ನು ಪೂರೈಸುತ್ತಿದ್ದರು. ಆಭರಣಗಳನ್ನು ತರುವುದಾಗಿ ಕೊಲ್ಲಾಪುರಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ತಂಗಿದ್ದ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Hubli
ರವಿ ಹೋತಪೇಟೆ

ಹುಬ್ಬಳ್ಳಿಯ ಬಹುತೇಕ ಕಡೆ ಅಯ್ಯಪ್ಪ ಮಾಲಾಧಾರಿಗಳ ಪೂಜೆಗಳಲ್ಲಿ ಭಾಗವಹಿಸುತ್ತಿದ್ದ ರವಿ ಹೋತಪೇಟೆ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊಲ್ಲಾಪುರ ಠಾಣೆಯ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸಂಬಂಧಿಗಳು ಕೊಲ್ಲಾಪುರಕ್ಕೆ ತೆರಳಿದ್ದಾರೆ.

ಪೊಲೀಸ್ ತನಿಖೆಯ ನಂತರವೇ ರವಿ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.