ETV Bharat / state

ರಾಜ್ಯದಲ್ಲೇ ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೊಂದಿದ ಹುಬ್ಬಳ್ಳಿಯ ಕಿಮ್ಸ್​​​​! - Hubli Kims hospital

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ದಿನಗಳ ಹಿಂದೆ 20 ಕಿಲೋ ಲೀಟರ್ ಎಂಎಲ್ಒ ಟ್ಯಾಂಕ್​ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಒಟ್ಟಾರೆ 40 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊಂದಿದೆ.

Hubli Kims
ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೊಂದಿದ ಹುಬ್ಬಳ್ಳಿ ಕಿಮ್ಸ್
author img

By

Published : Nov 25, 2020, 6:25 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಈಗ ರಾಜ್ಯದಲ್ಲಿ ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ದಿನಗಳ ಹಿಂದೆ 20 ಕಿಲೋ ಲೀಟರ್ ಎಂಎಲ್ಒ ಟ್ಯಾಂಕ್​ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಒಟ್ಟಾರೆ 40 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊಂದಿದೆ. ಈಗಾಗಲೇ ಕಿಮ್ಸ್​ನಲ್ಲಿ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದ್ದು, ಇದಕ್ಕೆ ಅನುಗುಣವಾಗಿ 50 ಲಕ್ಷ ಮೊತ್ತದ ಹೆಚ್ಚುವರಿ 20 ಕಿಲೋ ಲೀಟರ್ ಎಂಎಲ್ಒ ಟ್ಯಾಂಕ್ ಅಳವಡಿಕೆಯಾಗಿದೆ. ಐನಾಕ್ಸ್ ಕಂಪನಿ ಇಲ್ಲಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಮಾಡಿದ್ದು, ಸುರಕ್ಷತೆ ಕುರಿತಂತೆ ಚೆನ್ನೈನ ಅಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೊಂದಿದ ಹುಬ್ಬಳ್ಳಿ ಕಿಮ್ಸ್

ರಾಜ್ಯದಲ್ಲಿಯೇ ಎಲ್ಲಿಯೂ ಈಗ ಇಷ್ಟು ಪ್ರಮಾಣದ ಆಕ್ಸಿಜನ್ ಸಂಗ್ರಹದ ಆಸ್ಪತ್ರೆಯಿಲ್ಲ. ಅಷ್ಟಕ್ಕೂ ಕಿಮ್ಸ್​​ ಸರಾಸರಿ 11 ಕೆಎಲ್ ಆಕ್ಸಿಜನ್ ಬಳಕೆ ಮಾಡುತ್ತದೆ. ಕೊರೊನಾ ಸಂದರ್ಭದಲ್ಲಿ ಈ ಪ್ರಮಾಣ ಹೆಚ್ಚಿತು. ತುರ್ತು ಪರಿಸ್ಥಿತಿ ನಿರ್ವಹಣೆಗೆ 6 ಕೆಎಲ್ ಆಕ್ಸಿಜನ್ ಸಂಗ್ರಹ ಮೀಸಲಾಗಿರುತ್ತದೆ. ಅದರಲ್ಲೂ ಎಲ್ಲಾ ಸಂದರ್ಭದಲ್ಲಿ 3 ಕೆಎಲ್ ಆಕ್ಸಿಜನ್ ಸಂಗ್ರಹ ಇದ್ದೇ ಇರುತ್ತದೆ. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಕೊರತೆ ಆಗಲಾರದು ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಮೂಡುತ್ತಿರುವ ಬೆನ್ನಲ್ಲೇ ಕಿಮ್ಸ್​ನಲ್ಲಿ ಹೆಚ್ಚುವರಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಆಗಿರುವುದು ಕಿಮ್ಸ್ ಆಡಳಿತ ಮಂಡಳಿಗೆ ಉತ್ಸಾಹ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.