ETV Bharat / state

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಫೋಟೋ ಪೋಸ್ಟ್ ಪ್ರಕರಣ: ಆರೋಪಿ ಬಂಧನ - Hubli crime

Hubli crime: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಬಂಧಿಸಿರುವುದಾಗಿ ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮೀಷನರ್ ಸಂತೋಷ ಬಾಬು ತಿಳಿಸಿದ್ದಾರೆ.

Etv Bharat
Etv Bharat
author img

By

Published : Aug 9, 2023, 10:46 PM IST

ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮೀಷನರ್ ಸಂತೋಷ ಬಾಬು ಹೇಳಿಕೆ

ಹುಬ್ಬಳ್ಳಿ : ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಬಿಂಬಿಸುವಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸಂಬಂಧ ಅದೇ ಕಾಲೇಜಿನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮೀಷನರ್ ಸಂತೋಷ ಬಾಬು ಮಾಹಿತಿ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತನ ಇ-ಮೇಲ್ ಐಡಿ ಮತ್ತು ಸಾಮಾಜಿಕ ಜಾಲತಾಣಗಳ ವಿವರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ವರದಿ ಬಳಿಕವೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೆಷ್ಟು ಎಂದು ತಿಳಿದು ಬರಲಿದೆ. ಪ್ರಾಥಮಿಕ ತನಿಖೆಯಲ್ಲಿ ಈತನೊಂದಿಗೆ ಇನ್ನೂ ಕೆಲವರಿದ್ದಾರೆ ಎಂಬ ಶಂಕೆ ಇದೆ. ಇದೇ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದೇ ಕಾಲೇಜಿನಲ್ಲಿ ಹಾಜರಾತಿ ಕೊರತೆಯಿಂದಾಗಿ ಆರೋಪಿಯನ್ನು ಈ ವರ್ಷ ಅಡ್ಮಿಷನ್ ಮಾಡಿಕೊಂಡಿರಲಿಲ್ಲ. ಬಾಯ್ ಫ್ರೆಂಡ್​ಗಳಿದ್ದ ಹುಡುಗಿಯರನ್ನು ಟಾರ್ಗೆಟ್ ಮಾಡಿಕೊಂಡು ಅಂಥವರ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ. ಹುಡುಗಿಯರು ಬೇರೆ ಹುಡುಗರ ಜೊತೆ ಮಾತನಾಡುತ್ತಿರುವುದು ಹಾಗು ತನ್ನನ್ನು ಸರಿಯಾಗಿ ಮಾತನಾಡಿಸದೇ ಇರುವುದರಿಂದ ಈ ರೀತಿ ಮಾಡಿದ್ದಾನೆ ಎಂದು ಆರೋಪಿ ಹೇಳಿದ್ದಾನೆ.

ಸಮಾಜದಲ್ಲಿ ಅಶಾಂತಿ ಮಾಡಿಸುವ ಬಗ್ಗೆ ಹಾಗೂ ಪೊಲೀಸರನ್ನು ಪ್ರಚೋದಿಸುವ ಬರಹಗಳನ್ನು ಕೂಡ ಪೋಸ್ಟ್ ಮಾಡಿದ್ದರ ಹಿಂದೆ ಪೊಲೀಸರ ದಾರಿ ತಪ್ಪಿಸುವ ಉದ್ದೇಶ ಹೊಂದಿದ್ದ. ಎಲ್ಲ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ. ಬ್ರೈನ್ ಮ್ಯಾಪಿಂಗ್ ‌ಮಾಡಿದರೆ ಎಲ್ಲ ‌ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಆರೋಪಿ ಇಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಬಿಂಬಿಸುವಂತಹ ಫೋಟೋಗಳನ್ನು ಫೋಸ್ಟ್​ ಮಾಡಿದ್ದ. ವಿದ್ಯಾರ್ಥಿನಿಯರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂನಿಂದಲೂ ವರದಿ ಕೇಳಲಾಗಿತ್ತು.‌

ಎಬಿವಿಪಿ ಪ್ರತಿಭಟನೆ : ಮತ್ತೊಂದೆಡೆ, ಮಂಗಳವಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಜೆಸಿ ನಗರದ ವುಮೆನ್ಸ್ ಕಾಲೇಜಿನಿಂದ ಪ್ರಾರಂಭವಾದ ಪ್ರತಿಭಟನೆ ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್​ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ : ಹುಬ್ಬಳ್ಳಿ ಕಿಮ್ಸ್ ನರ್ಸ್​ಗಳನ್ನು ಕುರಿತು ರೀಲ್ಸ್ ಪ್ರಕರಣ.. ಒಂದು ವಾರ ಕಾಲೇಜಿನಿಂದ 11 ವೈದ್ಯ ವಿದ್ಯಾರ್ಥಿಗಳು ಅಮಾನತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.