ಹುಬ್ಬಳ್ಳಿ: ಕೊರೊನಾ ಸಂಕಷ್ಟದ ನಡುವೆ ಮುಸ್ಲಿಂ ಬಾಂಧವರ ಸಂತೋಷಕ್ಕೆ ಧಕ್ಕೆಯಾಗಬಾರದೆಂಬ ದೃಷ್ಟಿಯಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಪವಿತ್ರ ರಂಜಾನ್ ಹಬ್ಬ ಆಚರಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಾಯ ಹಸ್ತ ಚಾಚಲು ಮುಂದಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಶಾವಿಗೆ, ಮಸಾಲೆ, 6 ತರಹದ ಡ್ರೈ ಫ್ರೂಟ್ಸ್ ಹಾಗೂ ಸಕ್ಕರೆ ಪದಾರ್ಥಗಳನ್ನು ಒಳಗೊಂಡ ರಂಜಾನ್ ಕಿಟ್ ವಿತರಿಸಲು ಸಿದ್ದತೆ ನಡೆದಿದೆ. ಈಗಾಗಲೇ ನಗರದ ಹಲವೆಡೆ ಪ್ಯಾಕೆಟ್ ಗಳನ್ನು ಸಿದ್ದಪಡಿಸಲಾಗುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿಯೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬಡವರಿಗೆ, ನಿರ್ಗತಿಕರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿತ್ತು. ಈಗ ಬಡ ಮುಸ್ಲಿಂ ಬಾಂಧವರಿಗೆ ಹಬ್ಬ ಆಚರಿಸಲು ನೆರವಾಗಿದೆ.