ETV Bharat / state

ಕಸ ಮುಕ್ತ ನಗರಕ್ಕೆ ಪಣ ತೊಟ್ಟ ಹು - ಧಾ ಪಾಲಿಕೆ‌ : ರಂಗೋಲಿ ಬಿಡಿಸಿ ಜಾಗೃತಿ - ಹುಬ್ಬಳ್ಳಿ ಧಾರವಾಡ ಕಸ ವಿಲೇವಾರಿ

ಧಾರವಾಡ ವಲಯದ 12 ಮಂದಿ ಅಧಿಕಾರಿಗಳು, ಪೌರ ಕಾರ್ಮಿಕರು ಮಾಳಮಡ್ಡಿ ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಬಯಲು ಜಾಗದಲ್ಲಿ ಎಸೆದ ಕಸ ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಕಸ ಎಸೆಯದಂತೆ ಅರಿವು ಮೂಡಿಸಿದ್ದಾರೆ..

ರಂಗೋಲಿ ಬಿಡಿಸಿ ಜಾಗೃತಿ
ರಂಗೋಲಿ ಬಿಡಿಸಿ ಜಾಗೃತಿ
author img

By

Published : Jan 22, 2022, 12:23 PM IST

Updated : Jan 22, 2022, 1:44 PM IST

ಧಾರವಾಡ : ಬೆಂಗಳೂರು, ಮೈಸೂರು ನಂತರ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಸ್ವಚ್ಛತೆಗಾಗಿ ಪಾಲಿಕೆ‌ ವಿವಿಧ ಕ್ರಮಕೈಗೊಂಡಿದೆ. ಇದೀಗ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಕಸ ಹಾಕುವಲ್ಲಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಜನರು ಪಾಲಿಕೆ ವಾಹನದಲ್ಲಿ ಕಸ ಹಾಕದೇ ಬಯಲಿನಲ್ಲಿ ಎಸೆಯುತ್ತಿರುವುದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು, ರಂಗೋಲಿ ಬಿಡಿಸುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಧಾರವಾಡದಲ್ಲಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿ

ಧಾರವಾಡ ವಲಯದ 12 ಮಂದಿ ಅಧಿಕಾರಿಗಳು, ಪೌರ ಕಾರ್ಮಿಕರು ಮಾಳಮಡ್ಡಿ ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಬಯಲು ಜಾಗದಲ್ಲಿ ಎಸೆದ ಕಸ ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಕಸ ಎಸೆಯದಂತೆ ಅರಿವು ಮೂಡಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಪಾಲಿಕೆಗೆ ಕಸ ವಿಲೇವಾರಿಯೇ ದೊಡ್ಡ ತಲೆನೋವಾಗಿದೆ. ತ್ಯಾಜ್ಯ ನಿರ್ವಹಣೆ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಾಲಿಕೆಯು ಪ್ರತಿ ವರ್ಷ ನಗರದ ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ.

ಆದಾಗ್ಯೂ ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿಲ್ಲ. ಬಯಲು ಜಾಗದಲ್ಲಿ ಕಸ ಹಾಕದಂತೆ ದಂಡ ಹಾಕಿದರೂ ಸಹ ಕಸ ಎಸೆಯುವುದನ್ನ ಜನ ಇನ್ನೂ ಬಿಟ್ಟಿಲ್ಲ. ಹೀಗಾಗಿ, ಸ್ಥಳೀಯರ ಕ್ರಮಕ್ಕೆ ಬೇಸತ್ತ ಪಾಲಿಕೆ ಅಧಿಕಾರಿಗಳು, ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.