ETV Bharat / state

ಹು-ಧಾ ಮಹಾನಗರ ಪಾಲಿಕೆ ಚುನಾವಣೆ : ಸಿಎಂ ಬೊಮ್ಮಾಯಿ ಮನೆಗೆ ದೌಡಾಯಿಸಿದ ನಾಯಕರು - ಸಿಎಂ ಬೊಮ್ಮಾಯಿ ನಾಯಕರು ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹುಬ್ಬಳ್ಳಿ ವಿಶ್ವೇಶ್ವರನಗರದ ನಿವಾಸಕ್ಕೆ ಆಗಮಿಸಿರುವುದನ್ನು ಅರಿತ ಸಾಕಷ್ಟು ‌ಜನರು ಮನೆಯತ್ತ ಜಮಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ ಸಿಎಂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು..

BJP leaders visited CM Bommai house
ಸಿಎಂ ಬೊಮ್ಮಾಯಿ ಮನೆಗೆ ದೌಡಾಯಿಸಿದ ನಾಯಕರು
author img

By

Published : Aug 21, 2021, 9:25 PM IST

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಜೋರಾಗಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆ ದಿನವಾಗಿದ್ದು, ಬಿಜೆಪಿಯಲ್ಲಿ ಟಿಕೆಟ್​​​ಗಾಗಿ ಪೈಪೋಟಿ ಮುಂದುವರೆದಿದೆ.

ಸಿಎಂ ಬೊಮ್ಮಾಯಿ ಮನೆಗೆ ದೌಡಾಯಿಸಿದ ನಾಯಕರು

ಟಿಕೆಟ್​​​ಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ್ ಭೇಟಿಯಾಗಿ ಮಾತುಕತೆ ನಡೆಸಿದರು.‌ ಇವರಲ್ಲದೆ ಮಾಜಿ ಮೇಯರ್ ವೀರಣ್ಣ ಸವಡಿ ಅವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಪಕ್ಕಾ ಆಗಿದೆ.‌

ಇಲ್ಲಿಯವರೆಗೆ ತಿಪ್ಪಣ್ಣ ಮಜ್ಜಗಿ, ಲಕ್ಷ್ಮಿ ಉಪ್ಪಾರ, ಮಾಜಿ ಮೇಯರ್ ವಿಜಯಾನಂದ ಹೊಸಕೋಟೆ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ರಾಜಣ್ಣ ಕೊರವಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ, ಈ ನಾಯಕರು ಸಿಎಂ ಭೇಟಿಯಾಗಿ ಟಿಕೆಟ್​​​ಗಾಗಿ ದುಂಬಾಲು ಬಿದ್ದಿದ್ದಾರೆ.

ಈ ಬಾರಿ ವಾರ್ಡ್​​​​ಗಳ ಹೆಚ್ಚಳ ಹಾಗೂ ಮೀಸಲಾತಿ ಬದಲಾವಣೆಯಿಂದ ಅನೇಕರು‌ ಟಿಕೆಟ್ ವಂಚಿತರಾಗುವ ಸಂಭವವಿದ್ದು, ಹೇಗಾದರೂ ಮಾಡಿ‌ ಸಿಎಂ ಸಹಾಯದಿಂದ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಇನ್ನು, ಇದೆ ವಿಷಯವಾಗಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅರವಿಂದ ಬೆಲ್ಲದ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಸದೆ ಮರಳಿದ್ದು, ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ ಎನ್ನಲಾಗಿದೆ.

ಸಾರ್ವಜನಿಕರಿಂದ ಹಲವಾಲು ಸ್ವೀಕಾರ:

CM Bommai house
ಸಾರ್ವಜನಿಕರಿಂದ ಹಲವಾಲು ಸ್ವೀಕರಿಸಿದ ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹುಬ್ಬಳ್ಳಿ ವಿಶ್ವೇಶ್ವರನಗರದ ನಿವಾಸಕ್ಕೆ ಆಗಮಿಸಿರುವುದನ್ನು ಅರಿತ ಸಾಕಷ್ಟು ‌ಜನರು ಮನೆಯತ್ತ ಜಮಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ ಸಿಎಂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಓದಿ: ನಾನು ರಾಜ್ಯಕ್ಕೆ ಸಿಎಂ ಇರಬಹುದು.. ಆದ್ರೆ, ಹುಬ್ಬಳ್ಳಿಯವನು.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.