ETV Bharat / state

ಒಳಚರಂಡಿಗೆ ಇಳಿದ ಪೌರಕಾರ್ಮಿಕ: ಕಣ್ಣು‌ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು

ರಾಜ್ಯದಲ್ಲಿ ಮ್ಯಾನ್​ ಹೋಲ್​ನಲ್ಲಿ ಇಳಿದು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಎಷ್ಟೋ ಕಾರ್ಮಿಕರು ಸಾವನ್ನಪ್ಪಿರುವ ಉದಾಹರಣೆಗಳ ನಡುವೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮ್ಯಾನ್ ಹೋಲ್​ಗಳಲ್ಲಿ ಇಳಿದು ಸ್ವಚ್ಛಗೊಳಿಸಲು ಮುಂದಾದ ಘಟನೆ ನಡೆದಿವೆ.

ಒಳಚರಂಡಿಗೆ ಇಳಿದು ಸ್ವಚ್ಚಗೊಳಿಸಿದ ಪೌರ ಕಾರ್ಮಿಕ
author img

By

Published : Jul 29, 2019, 5:33 PM IST

ಹುಬ್ಬಳ್ಳಿ: ಒಂದಲ್ಲಾ ಒಂದು ಯಡವಟ್ಟಿನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸುದ್ದಿಯಲ್ಲಿರುವುದು ಸಾಮಾನ್ಯವಾಗಿದೆ. ನಗರದ ಒಳಚರಂಡಿಯ ಮ್ಯಾನ್ ಹೋಲ್​ಗಳನ್ನು ಯಂತ್ರಗಳಿದ್ದರೂ ಕಾರ್ಮಿಕರೇ ಇಳಿದು ಸ್ವಚ್ಛಗೊಳಿಸಲು ಮುಂದಾದ ಘಟನೆ ನಗರದ ಮೂರು ಸಾವಿರ ಮಠದ ರಸ್ತೆಯಲ್ಲಿ ನಡೆದಿದೆ.

ಒಳಚರಂಡಿಯ ಸ್ವಚ್ಛಗೊಳಿಸಲು ಯಂತ್ರಗಳ‌ ಬಳಸಬೇಕು, ಯಾವುದೇ ವ್ಯಕ್ತಿ ಮ್ಯಾನಹೋಲ್​ನಲ್ಲಿ ಇಳಿದು‌ ಸ್ವಚ್ಛಗೊಳಿಸಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಆದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಯಂತ್ರಗಳನ್ನು ಬಳಸಿಕೊಳ್ಳದೇ, ನಗರದಲ್ಲಿ ಮ್ಯಾಲ್​ಹೋಲ್​ಗಳಲ್ಲಿ ಕಾರ್ಮಿಕರೇ ಇಳಿದು ಕ್ಲೀನ್ ಮಾಡುತ್ತಿರುವುದು ಅಮಾನವೀಯ ಕೃತ್ಯ.

ಒಳಚರಂಡಿಗೆ ಇಳಿದು ಸ್ವಚ್ಚಗೊಳಿಸಿದ ಪೌರ ಕಾರ್ಮಿಕ

ಮಹಾನಗರ ಪಾಲಿಕೆಯ ಆಯುಕ್ತರಾದ ಸುರೇಶ್​ ಇಟ್ನಾಳ್​ ಅಧಿಕಾರವಹಿಸಿಕೊಂಡಾಗ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ವಾಗ್ದಾನ ಸಹ ಮಾಡಿದ್ದರು. ಈಗ ನಗರದ ಹೃದಯ ಭಾಗದಲ್ಲಿ ಪಾಲಿಕೆಯ ಕಾರ್ಮಿಕ ಮ್ಯಾನ್​ಹೋಲ್‌ನಲ್ಲಿ ಇಳಿದು ಸ್ವಚ್ಛ ಮಾಡುತ್ತಿದ್ದು ಎಷ್ಟು ಸರಿ ಇದಕ್ಕೆ ಆಯುಕ್ತರೇ ಉತ್ತರ ಕೊಡಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಮಾಹಿತಿ ಇದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಮುಂದಾದ್ರೂ ಪಾಲಿಕೆ ಅಧಿಕಾರಿಗಳು ಇಂತಹ ಘಟನೆಗಳು ಆಗದ ಹಾಗೇ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಒಳಚರಂಡಿಗೆ ಇಳಿದ ಪೌರಕಾರ್ಮಿಕ- ಕಣ್ಣು‌ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು.

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಯಡವಟ್ಟು ಒಂದಲ್ಲಾ ಒಂದು ಇದ್ದೆ ಇರುತ್ತದೆ. ಈಗ
ನಗರದ ಒಳಚರಂಡಿಯ ಮ್ಯಾನ್ ಹೋಲ್ ಗಳನ್ನು ಯಂತ್ರಗಳಿದ್ದರು ಕೂಡಾ ಕಾರ್ಮಿಕರೇ ಇಳಿದು ಸ್ವಲ್ಪ ಗೊಳಿಸಲು ಮುಂದಾದ ಘಟನೆ ನಗರದ ಮೂರು ಸಾವಿರ ಮಠದ ರಸ್ತೆಯಲ್ಲಿ ನಡೆದಿದೆ.ಹ ಇಂದು ಅತ್ಯಾಧುನಿಕ ಯಂತ್ರಗಳ‌ ಮೂಲಕ ಒಳಚರಂಡಿ,ಸ್ವಚ್ಛಗೊಳಿಸಲಾಗುತ್ತಿದೆ.ಅಷ್ಟಕ್ಕೊ ಒಳಚರಂಡಿಯ
ಮ್ಯಾನಹೋಲ್ ನಲ್ಲಿ ಇಳಿದು‌ ಸ್ವಚ್ಛಗೊಳಿಸಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ.ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಹಲವರು ಯಂತ್ರಗಳಿದ್ದರು ಕೂಡಾ ನಗರದಲ್ಲಿ ಮ್ಯಾನ್ ಹೋಲ್ ಗಳನ್ನು ಕಾರ್ಮಿಕರೇ ಇಳಿದು ಕ್ಲೀನ್ ಮಾಡುತ್ತಿರುವುದು ಅಮಾನವೀಯ ಕೃತ್ಯ. ಹುಬ್ಬಳ್ಳಿy ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಸುರೇಶ ಇಟ್ನಾಳ ಅಧಿಕಾರವಹಿಸಕೊಂಡಾಗ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ವಾಗ್ದಾನ ಸಹ ಮಾಡಿದ್ದರು.ಈಗ ನಗರದ ಹೃದಯ ಭಾಗದಲ್ಲಿ
ಅದರಲ್ಲಿ ಪಾಲಿಕೆಯ ಕಾರ್ಮಿಕ ಮ್ಯಾನ್ ಹೋಲ್‌ನಲ್ಲಿ ಇಳಿದು ಸ್ವಚ್ಛ ಮಾಡುತ್ತಿದ್ದು ಎಷ್ಟು ಸರಿ ಇದಕ್ಕೆ ಆಯುಕ್ತರೇ ಉತ್ತರ ಕೊಡಬೇಕಾಗಿದೆ.ರಾಜ್ಯದಲ್ಲಿ ಮ್ಯಾನ್ ಹೋಲ್ ನಲ್ಲಿ ಇಳಿದು ಸ್ವಚ್ಛಗೊಳಿಸುವಾಗ ಕಾರ್ಮಿಕರು ಸಾವನ್ನಪ್ಪಿದ‌ ಘಟನೆ ಸಹ ನಡೆದಿವೆ.
ಇಷ್ಟೆಲ್ಲಾ ಮಾಹಿತಿ ಇದ್ರೂ ಸಹ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಅಷ್ಟಕ್ಕೂ ಮ್ಯಾನವೆಲ್ ಕ್ಲಿನ್ ಮಾಡೊಕೇ ಅಂತ ಮಷಿನ್ ಗಳಿದ್ರೂ ಸಹ ಅವುಗಳು ಉಪಯೋಗಿಸದೆ ಇರುವುದರಿಂದ ಅವುಗಳು ತುಕ್ಕು ಹಿಡಿಯುವ ಸಂಭವ ಬಂದಿದೆ!ಇನ್ನೂ ಮುಂದಾದ್ರೂ ಪಾಲಿಕೆ ಅಧಿಕಾರಿಗಳು ಇಂತಹ ಘಟನೆಗಳು ಆಗದ ಹಾಗೇ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ...

_________________________
ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.