ETV Bharat / state

ಕಮಿಷನ್​​ ದಂಧೆ ವಿರುದ್ಧ ಹು-ಧಾ ಪಾಲಿಕೆ ಕ್ರಮ: ಶಾಸಕರ ನೇತೃತ್ವದಲ್ಲಿ ಕಡಿವಾಣ? - Etv bharat kannada

ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಗಂಭೀರ ಆರೋಪವಿದೆ.

Hubli Dharwad Metropolitan Corporation
ಕಮಿಷನ್​​ ಕರಾಳ ದಂಧೆ ವಿರುದ್ಧ ಸಿಡಿದೆದ್ದ ಪಾಲಿಕೆ
author img

By

Published : Aug 11, 2022, 5:35 PM IST

Updated : Aug 11, 2022, 6:51 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತೆಗಾಗಿ 193 ಆಟೋ, ಟಿಪ್ಪರ್​ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಆಟೋ ಮತ್ತು ಟಿಪ್ಪರ್​ ಚಾಲಕರು ತಮ್ಮ ವೇತನ ಪಡೆಯಲು ಪ್ರತಿ ತಿಂಗಳು ಮೂರು ಸಾವಿರ ರೂ ಕಮಿಷನ್ ಕೊಡಬೇಕಾಗಿತ್ತು ಎಂಬ ಆರೋಪ ಕೇಳಿಬಂದಿದೆ. ವೇತನದಲ್ಲಿಯೂ ಕೂಡ ಬಹುದೊಡ್ಡ ಹಗರಣ ನಡೆದಿದ್ದು, ಚಾಲಕರಿಗೆ 22,505 ರೂ. ವೇತನ ನೀಡಬೇಕಿತ್ತು. ಆದ್ರೆ ಅವರಿಗೆ ಕೇವಲ 14 ಸಾವಿರ ಕೊಡಲಾಗ್ತಿದ್ದು, ಅದರಲ್ಲಿ 3,000 ಕಮಿಷನ್​​ಗಾಗಿ ಮೊದಲೇ ಕಟ್ ಆಗುತ್ತಿತ್ತು.

ಇದರಿಂದ ಚಾಲಕರು ಕಮಿಷನ್ ಕರಾಳ ದಂಧೆಗೆ ಬೇಸತ್ತಿದ್ದರು. ಈ ಬಗ್ಗೆ ಆಟೋ, ಟಿಪ್ಪರ್ ಚಾಲಕರು ಪಾಲಿಕೆ ಆಯುಕ್ತರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.

ಕಮಿಷನ್​​ ದಂಧೆ ವಿರುದ್ಧ ಹು-ಧಾ ಪಾಲಿಕೆ ಕ್ರಮ

ಪಾಲಿಕೆಯಲ್ಲಿ ಏಜೆನ್ಸಿಗಳ ದಬ್ಬಾಳಿಕೆ ಹೆಚ್ಚಾಗಿದ್ದು, 55 ಏಜೆನ್ಸಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಇವು ನೌಕರರಿಗೆ ಪೂರ್ಣ ಪ್ರಮಾಣದ ವೇತನ ನೀಡುತ್ತಿಲ್ಲ.18,000 ರೂ. ವೇತನ ಇದ್ದರೆ 14,000 ಕೈಗೆ ಸಿಗುತ್ತದೆ. ಇದರಲ್ಲಿ ಏಜೆನ್ಸಿಗಳು 3,000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಯಾವ ಮಿನಿಸ್ಟರ್, ಎಂಎಲ್ಎ ಹಾಗೂ ಸಿಎಂಗೆ ದೂರು ಕೊಟ್ಟರೂ, ನಾವು ಬಚಾವ್ ಆಗಿ ಬರ್ತೀವಿ ಎಂದು ಆಟೋ, ಟಿಪ್ಪರ್ ಚಾಲಕರಿಗೆ ಏಜೆನ್ಸಿಯವರು ಹೇಳುತ್ತಿದ್ದಾರೆ. ಈ ಕುರಿತು ಶಾಸಕರೇ ಕೆಂಡಾಮಂಡಲರಾಗಿ ವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಳೆಗಾಲದಲ್ಲಿಯೂ ನೀರು ಪೂರೈಕೆಯಲ್ಲಿ ವ್ಯತ್ಯಯ: ಕಾನೂನು ಸಮರಕ್ಕೆ ಮುಂದಾದ ಪಾಲಿಕೆ

Last Updated : Aug 11, 2022, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.