ಹುಬ್ಬಳ್ಳಿ: ಇಂಡಿಗೋ ಏರ್‌ಲೈನ್ಸ್ ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ಆಗಸ್ಟ್ 1ರಿಂದ ಆರಂಭಿಸಲಿದೆ. ವಿಮಾನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
ವೇಳಾಪಟ್ಟಿ ಹೀಗಿದೆ..
ಚೆನ್ನೈನಿಂದ ಬೆಳಗ್ಗೆ 6.05ಕ್ಕೆ ಹೊರಡುವ ಇಂಡಿಗೋ ವಿಮಾನ ಹುಬ್ಬಳ್ಳಿಗೆ 8.10ಕ್ಕೆ ಆಗಮಿಸಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 8.35ಕ್ಕೆ ಹೊರಡುವ ವಿಮಾನ ಕೊಚ್ಚಿನ್‌ಗೆ 10.20ಕ್ಕೆ ತಲುಪಲಿದೆ. ಕೊಚ್ಚಿನ್‌ನಿಂದ 10.50ಕ್ಕೆ ಹೊರಟು, 12.40ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ.
ಹುಬ್ಬಳ್ಳಿಯಿಂದ ಮಧ್ಯಾಹ್ನ 1 ಗಂಟೆಗೆ ಮುಂಬೈಗೆ ವಿಮಾನ ಸಂಚಾರ ನಡೆಸಲಿದ್ದು, 2.45ಕ್ಕೆ ತಲುಪಲಿದೆ. ಮುಂಬೈನಿಂದ 3.15ಕ್ಕೆ ಹೊರಟು, 4.40ಕ್ಕೆ ಹುಬ್ಬಳ್ಳಿಗೆ ವಿಮಾನ ವಾಪಸ್ ಆಗಲಿದೆ.
ಸಂಜೆ 5.20ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 6.40ಕ್ಕೆ ಕಣ್ಣೂರು ತಲುಪಲಿದೆ. 7 ಗಂಟೆಗೆ ಕಣ್ಣೂರಿನಿಂದ ಹೊರಡುವ ವಿಮಾನ 8.20ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ. ರಾತ್ರಿ 8.35ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 9.55ಕ್ಕೆ ಬೆಂಗಳೂರು ತಲುಪಲಿದೆ.
ಮುಂಜಾನೆ ವಿಮಾನ:
ಬೆಂಗಳೂರಿನ ಕೆಐಎನಿಂದ ಬೆಳಗ್ಗೆ 7.15ಕ್ಕೆ ಹೊರಡುವ ವಿಮಾನ 8.40ಕ್ಕೆ ಹುಬ್ಬಳ್ಳಿ ತಲುಪಲಿದೆ. 9 ಗಂಟೆಗೆ ಹೊರಡುವ ವಿಮಾನ 9.50ಕ್ಕೆ ಬೆಂಗಳೂರು ತಲುಪಲಿದೆ ಎಂದು ವೇಳಾಪಟ್ಟಿ ಹೇಳಿದೆ.
10.20ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 11.10ಕ್ಕೆ ಹುಬ್ಬಳ್ಳಿಗೆ ಬರಲಿದ್ದು, 11.40ಕ್ಕೆ ಪುನಃ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 1 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಬೆಂಗಳೂರು-ಚೆನ್ನೈ ವಯಾ ಹುಬ್ಬಳ್ಳಿ ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದ್ದು, ಸಂಜೆ 5 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಚೆನ್ನೈಗೆ 5.20ಕ್ಕೆ ಹೊರಡಲಿದ್ದು, 7.10ಕ್ಕೆ ಬೆಂಗಳೂರು ತಲುಪಲಿದೆ.
ಇದನ್ನೂ ಓದಿ: ಹಾಸನದಲ್ಲಿ ಹೊಸ ಪ್ರಯತ್ನ : ಮನೆಯ ಕೈತೋಟದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದ ಇಂಜಿನಿಯರ್