ETV Bharat / state

ಸಹಾಯ ಕೇಳುವ ನೆಪದಲ್ಲಿ ಬ್ಯಾಂಕ್ ಖಾತೆ ಮಾಡಿಸಿಕೊಂಡು ಪಂಗನಾಮ ಹಾಕಿದ ಖದೀಮ - ಸಹಾಯ ಕೇಳುವ ನೆಪದಲ್ಲಿ ಬ್ಯಾಂಕ್ ಖಾತೆ ಮಾಡಿಸಿಕೊಂಡು ಪಂಗನಾಮ

ಇನ್​​​​ಸ್ಟಾಗ್ರಾಮ್ ಮೂಲಕ ಯುವಕನನ್ನು ಪರಿಚಯ ಮಾಡಿಕೊಂಡ ಖದೀಮನೊಬ್ಬ, ಆತನ ಹೆಸರಿನಲ್ಲಿ 2 ಬ್ಯಾಂಕ್ ಖಾತೆಗಳನ್ನು ತೆರೆದು ಆತನಿಗೆ ಪಂಗನಾಮ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Cyber crime
ಸೈಬರ್​ ಕ್ರೈಂ
author img

By

Published : Mar 4, 2021, 1:13 PM IST

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದ ಮೂಲಕ ಯುವಕನನ್ನು ಪರಿಚಯ ಮಾಡಿಕೊಂಡ ಖದೀಮನೊಬ್ಬ, ಆತನ ಹೆಸರಿನಲ್ಲಿ 2 ಬ್ಯಾಂಕ್ ಖಾತೆಗಳನ್ನು ತೆರೆದು ತನ್ನ ಅಕ್ರಮ ಕೆಲಸಕ್ಕೆ ಬಳಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಲಘಟಗಿ ಮೂಲದ ಮಾಲತೇಶ ಎಂಬುವರಿಗೆ ಇನ್ ಸ್ಟಾಗ್ರಾಮ್ ಮೂಲಕ ದೇವದಾಸ್ ಎಂಬಾತ ಪರಿಚಯವಾಗಿದ್ದ. ಮೇ. 2019ರಲ್ಲಿ ಮೊಬೈಲ್ ಫೋನ್​ಗೆ ಕರೆ ಮಾಡಿದ್ದ‌. ನಾನು ಮತ್ತು ನನ್ನ ಸ್ನೇಹಿತರಿಬ್ಬರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ.‌ ಕಾಲೇಜು ಶುಲ್ಕ ಪಾವತಿಸಲು ಸ್ಥಳೀಯವಾಗಿ ಬ್ಯಾಂಕ್ ಖಾತೆ ತೆರೆಯಲು ಹೇಳಿದ್ದಾರೆ.

ಅವರ ಮಾತು‌ ನಂಬಿ ಮಾಲತೇಶ್​ ತನ್ನ ಹಾಗೂ ಸಹೋದನ ಹೆಸರಿನಲ್ಲಿ ಧಾರವಾಡದ ಬ್ಯಾಂಕ್ ಆಫ್​ ಬರೋಡಾ ಶಾಖೆಯಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಅದಕ್ಕೆ ಆರೋಪಿ ದೇವದಾಸ್ ಕೊಟ್ಟ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರು.

ಆದ್ರೆ ಆರೋಪಿಗಳು 2019 ರಿಂದ ಈವರೆಗೂ ಬ್ಯಾಂಕ್ ಖಾತೆ ದುರುಪಯೋಗ ಮಾಡಿಕೊಂಡು ಅನಧಿಕೃತ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಾಲತೇಶ ಅವರು ಬ್ಯಾಂಕ್​ಗೆ ಹೋಗಿ ಶಿಕ್ಷಣ ಸಾಲದ ಬಗ್ಗೆ ವಿಚಾರಿಸಿದಾಗ ವಂಚನೆ ಬಯಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.