ಹುಬ್ಬಳ್ಳಿ: ರಕ್ಷಾ ಬಂಧನದ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿಯ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರು ರಾಖಿ ಕಟ್ಟಿ ಶುಭಾಶಯ ತಿಳಿಸಿದರು.
ಈ ವೇಳೆ ಮಾತನಾಡಿದ ಶೆಟ್ಟರ್, ರಾಖಿ ಹಬ್ಬ ಸಹೋದರ- ಸಹೋದರರಿಗೆ ವಿಶೇಷವಾಗಿದ್ದು, ಜೀವನದಲ್ಲಿ ಸಂಕಷ್ಟ ಎದುರಾದಾಗ ಸಹೋದರ ಪಾರು ಮಾಡುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಈ ಹಬ್ಬ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆ ಪೌರ ಕಾರ್ಮಿಕರಾದ ಗಂಗಮ್ಮ ಸಿದ್ರಾಮಪುರ, ಸೀತಮ್ಮ ಮುದ್ದಿನಗೇರಿ, ಹುಲಿಗೆಮ್ಮ ಚಿಕ್ಕತುಂಬಳ, ಬಸಮ್ಮ ಮದರಿ ಹಾಗೂ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ ಇದ್ದರು.