ETV Bharat / state

ಗೋವಾ ರಾಜ್ಯಕ್ಕೆ ಹುಬ್ಬಳ್ಳಿಯಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ - Hubli news

ವಾಸ್ಕೋಗೆ ಹೋಗುವ ಬಸ್​ ರಾತ್ರಿ 10-30ಕ್ಕೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬೆಳಗ್ಗೆ 6-00ಕ್ಕೆ ವಾಸ್ಕೋ ತಲುಪುತ್ತದೆ. ವಾಸ್ಕೋದಿಂದ ಮಧ್ಯಾಹ್ನ 1-30ಕ್ಕೆ ಹೊರಟು ಹುಬ್ಬಳ್ಳಿಗೆ ಸಂಜೆ 7-30ಕ್ಕೆ ಆಗಮಿಸುತ್ತದೆ..

ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ಗಳ ಸಂಚಾರ

author img

By

Published : Sep 4, 2020, 9:42 PM IST

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತಿದೆ. ಈ ಬಸ್​​ಗಳು ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ.

ಲಾಕ್​​ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ 1 ರಾಜಹಂಸ ಮತ್ತು 8 ವೇಗಧೂತ ಸೇರಿ 9, ವಾಸ್ಕೋಗೆ 1 ಮತ್ತು ಮಡಗಾಂವಗೆ 1 ಒಟ್ಟು 11 ಬಸ್​​ಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು. ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 ವೇಗಧೂತ) ಹಾಗೂ ವಾಸ್ಕೋ ಮತ್ತು ಮಡಗಾಂವಗೆ ತಲಾ ಒಂದು ಬಸ್ ಸಂಚಾರವನ್ನು ಆರಂಭಿಸಲಾಗಿದೆ.

ಪಣಜಿಗೆ ಹೋಗುವ ರಾಜಹಂಸ ಬಸ್​​ ಬೆಳಗ್ಗೆ 8-00ಕ್ಕೆ ಮತ್ತು ವೇಗಧೂತ ಬಸ್​​​ಗಳು ಬೆಳಗ್ಗೆ 8-30,10-30 ಮತ್ತು ರಾತ್ರಿ 11-45 ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತವೆ. ಪಣಜಿಯಿಂದ ಹುಬ್ಭಳ್ಳಿಗೆ ಬರುವ ರಾಜಹಂಸ ಬಸ್​​ ಮಧ್ಯಾಹ್ನ 2-30ಕ್ಕೆ, ವೇಗಧೂತ ಬಸ್​​ಗಳು ಬೆಳಗ್ಗೆ 10-30, ಮಧ್ಯಾಹ್ನ 3-00 ಮತ್ತು ಸಂಜೆ 5-15ಕ್ಕೆ ಪಣಜಿಯಿಂದ ಹೊರಡುತ್ತವೆ. ಈ ಬಸ್​​ಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ಗಳ ಸಂಚಾರ
ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ಗಳ ಸಂಚಾರ

ಮಡಗಾಂವಗೆ ಹೋಗುವ ಬಸ್​​ ಬೆಳಗ್ಗೆ 8-30ಕ್ಕೆ ಹುಬ್ಬಳ್ಳಿಯಿಂದ ಹೊರಟು ಕಲಘಟಗಿ, ಯಲ್ಲಾಪುರ, ಅಂಕೋಲಾ, ಕಾರವಾರ, ಸದಾಶಿವಗಡ, ಕಾಣಕೋಣ ಮಾರ್ಗವಾಗಿ ಮಧ್ಯಾಹ್ನ 2-30ಕ್ಕೆ ಮಡಗಾಂವ ತಲುಪುತ್ತದೆ. ಮಧ್ಯಾಹ್ನ 3-00ಕ್ಕೆ ಮಡಗಾಂವನಿಂದ ಹೊರಟು ರಾತ್ರಿ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.

ವಾಸ್ಕೋಗೆ ಹೋಗುವ ಬಸ್​ ರಾತ್ರಿ 10-30ಕ್ಕೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬೆಳಗ್ಗೆ 6-00ಕ್ಕೆ ವಾಸ್ಕೋ ತಲುಪುತ್ತದೆ. ವಾಸ್ಕೋದಿಂದ ಮಧ್ಯಾಹ್ನ 1-30ಕ್ಕೆ ಹೊರಟು ಹುಬ್ಬಳ್ಳಿಗೆ ಸಂಜೆ 7-30ಕ್ಕೆ ಆಗಮಿಸುತ್ತದೆ.

ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್‌ಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.