ETV Bharat / state

ಭಾರತದ ಮೊದಲ ಸ್ವದೇಶಿ ಪಿಸ್ತೂಲ್‌ ಅಭಿವೃದ್ಧಿಪಡಿಸಿದ ಹುಬ್ಬಳ್ಳಿ ಹುಡುಗ: ಏನು ಈ ಶಸ್ತ್ರಾಸ್ತ್ರಗಳ ವೈಶಿಷ್ಟ್ಯತೆ..? - ಅಟಲ್ ಪಿಸ್ತೂಲ್ ವಿಶೇಷತೆ ಏನು

ಈಗಾಗಲೇ ಭಾರತೀಯ ಸೇನೆಯಲ್ಲಿ ಹಳೆಯ ಕಾಲದ ಪಿಸ್ತೂಲ್ ಬಳಕೆಯಲ್ಲಿದ್ದು, ಈಗ ಹೊಸ‌ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಕನಸನ್ನು ಹುಬ್ಬಳ್ಳಿಯ ಯುವಕ ಅಂಕುಶ ಕೊರವಿ ಕಂಡಿದ್ದಾರೆ.

Ankush Koravi and Gun
ಯುವಕ ಅಂಕುಶ ಕೊರವಿ ಮತ್ತು ಸ್ವದೇಶಿ ಪಿಸ್ತೂಲ್​
author img

By

Published : Sep 27, 2022, 3:16 PM IST

Updated : Sep 27, 2022, 5:42 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ಯುವಕ ಅಂಕುಶ್​ ಕೊರವಿ ಆಸ್ಟ್ರ್​ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಹಾಗೂ ಹುಬ್ಬಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಆತ್ಮ ನಿರ್ಭರ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ಅನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳ ಹಾಗೂ ಪೊಲೀಸ್ ಇಲಾಖೆಗೆ ತಾವೇ ಸಂಶೋಧನೆ ಮಾಡಿರುವ ವಿವಿಧ ಆಯುಧಗಳನ್ನು ಒದಗಿಸುವ ಕನಸು ಕಟ್ಟಿಕೊಂಡಿದ್ದಾರೆ.

ಸ್ವದೇಶಿ ಪಿಸ್ತೂಲ್ ತಯಾರಿಸಿದ ಹುಬ್ಬಳ್ಳಿ ಅಂಕುಶ ಕೊರವಿ

ಈಗಾಗಲೇ ಭಾರತೀಯ ಸೇನೆಯಲ್ಲಿ ಹಳೆಯ ಕಾಲದ ಎರಡನೇ ವಿಶ್ವಯುದ್ಧದ ಯುಗದ ಬಂದೂಕುಗಳು ಬಳಕೆಯಲ್ಲಿದ್ದು, ಇಷ್ಟರವರೆಗೂ ಭಾರತದಲ್ಲಿ ಯಾವುದೇ ಆಧುನಿಕ ಸ್ವದೇಶಿ ಪಿಸ್ತೂಲ್ ಇರಲಿಲ್ಲ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪಿಸ್ತೂಲ್ ಆವಿಷ್ಕರಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದಾಗಲೇ ಇಂತಹದೊಂದು ಕಾರ್ಯಕ್ಕೆ ಮುಂದಾಗಿರುವ ಅಂಕುಶ್​ ಹೊಸ‌ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಕನಸು ಕಂಡಿದ್ದಾರೆ. ಭಾರತೀಯ ಸೇನೆ ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಇಲ್ಲಿ ಎಲ್ಲವೂ ಸ್ವದೇಶಿ.. ವಿದೇಶದಿಂದ ಒಂದೇ ಒಂದು ಬಿಡಿ ಭಾಗ ತರಿಸಿಲ್ಲ: ಈ ಪಿಸ್ತೂಲ್​ಗಳಲ್ಲಿ ಯಾವ ಸಣ್ಣ ಬಿಡಿಭಾಗವೂ ವಿದೇಶದಿಂದ ತರಿಸಿದ್ದಲ್ಲ. ಎಲ್ಲವೂ ಭಾರತದ್ದೇ ಆಗಿದೆ. ಮಿಲಿಟರಿ ಮತ್ತು ಪೋಲಿಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಅನುಭವಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಮಾಹಿತಿ ಆಧಾರದಲ್ಲಿ, ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ATAL ಮಾಡ್ಯುಲರ್ ಪಿಸ್ತೂಲ್ ಅನ್ನು ನಮ್ಮ ಸೈನಿಕರಿಗೆ, ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತದೆ ಎಂದು ಅಂಕುಶ್​ ಕೊರವಿ ಹೇಳಿದ್ದಾರೆ.

ಒಬ್ಬ ಯುವಕ ರಕ್ಷಣಾ ವಲಯದ ಸಾಮಗ್ರಿಗಳನ್ನು ಅದರಲ್ಲೂ ಆಯುಧಗಳ ವಿಚಾರಕ್ಕೆ ಬಂದಾಗ ಅಷ್ಟು ಸುಲಭಗವಾಗಿ ತಯಾರಿಸಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ನಿಯಂತ್ರಣಗಳಿರುತ್ತದೆ. ಆದರೆ, ಯಾವುದೇ ಹಂತದಲ್ಲಿ ನಿರಾಶೆಗೊಳಗಾಗದೇ ತಮ್ಮ ಹುಮ್ಮಸ್ಸಿನಿಂದ ಈ ಹಂತದವರೆಗೆ ಬಂದಿದ್ದಾನೆ. ಸದ್ಯಕ್ಕೆ ಇದನ್ನು ಪ್ರೋಟೋಟೈಪ್​ ಮಾಡಿದ್ದಾನೆ.

ಇನ್ನು ಮುಂದೆ ಸರ್ಕಾರ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೋಡಿ, ಅಪ್ರೂವ್​ ಮಾಡಿದ ನಂತರ ಅದನ್ನು ತಯಾರಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಿವೃತ್ತ ಸೈನ್ಯಾಧಿಕಾರಿ ಮೇಜರ್​ ಸಿ ಎಸ್​ ಆನಂದ್​.

ಅಟಲ್ ಪಿಸ್ತೂಲ್ ವಿಶೇಷತೆ ಏನು?: ಈ ಪಿಸ್ತೂಲ್​ ಪರಿಸ್ಥಿತಿಗನುಸಾರ ಬದಲಾಯಿಸಬಹುದಾದ ಫೈರ್ ಕಂಟ್ರೋಲ್ ಹೊಂದಿದೆ. ಮೂರು ವಿಶಿಷ್ಟವಾದ ಆ್ಯಕ್ಷನ್ ಮೆಕ್ಯಾನಿಸಂ ಹೊಂದಿರುವುದರಿಂದ ಡ್ಯೂಟಿ ಸಮಯದಲ್ಲಿ ಚಲನೆಯಲ್ಲಿ ಮತ್ತು ಮರೆಮಾಚಿ ಬಳಸಲು ಸಹಕಾರಿಯಾಗಿದೆ. (ಪೇಟೆಂಟ್ ಬಾಕಿ ಉಳಿದಿದೆ) ಇದು ವಿಶ್ವದ ಅತ್ಯಂತ ಸುರಕ್ಷಿತ ಹಾಗೂ ಸುಲಭವಾಗಿ ಕ್ಯಾರಿ ಮಾಡಬಹುದಾದ ಪಿಸ್ತೂಲ್.

ಭಾರತೀಯ ಬಳಕೆದಾರರ ಮತ್ತು ಭಾರತೀಯ ನೈಸರ್ಗಿಕ ಪರಿಸ್ಥಿತಿಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಮಿಶ್ರಲೋಹದ ಉಕ್ಕಿನ ಸ್ಲೈಡ್ ಮತ್ತು ಪಾಲಿಮರ್ ಫ್ರೇಮ್ ಬಳಸಿರುವುದರಿಂದ ಪಿಸ್ತೂಲ್​ ಹಗುರವಾಗಿದ್ದು, ಮೂರು ಮ್ಯಾಗಜೀನ್ ಸಾಮರ್ಥ್ಯದ (15/17/21 ಸುತ್ತುಗಳ ಸಾಮರ್ಥ್ಯ) ಆಯ್ಕೆಗಳನ್ನು ಒಳಗೊಂಡಿದೆ. ATAL ಪಿಸ್ತೂಲ್​ ಅನ್ನು ಎರಡು ಕ್ಯಾಲಿಬರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, 9x19mm ಸಶಸ್ತ್ರ ಪಡೆಗಳ ಬಳಕೆಗಾಗಿ ಮತ್ತು 0.32 ಸೈಜಿನದ್ದು ಪರವಾನಗಿ ಪಡೆದ ನಾಗರಿಕರಿಗಾಗಿ ಸಿದ್ಧಪಡಿಸಲಾಗಿದೆ.

ಈ ಶಸ್ತ್ರಾಸ್ತ್ರವು ಆಧುನಿಕ ಹಾಗೂ ಸ್ಥಳೀಯ ಬೇಡಿಕೆಗಳಿಗೆ ತಕ್ಕುದಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಪಿಸ್ತೂಲ್‌ಗಳು ಮತ್ತು ಅತಿಯಾದ ಬೆಲೆಯ ಆಮದು ಮಾಡಿದ ಪಿಸ್ತೂಲ್‌ಗಳಿಗೆ ಇದು ಪರ್ಯಾಯವಾಗಿದೆ. ಇದು ನಮ್ಮ ಸಶಸ್ತ್ರ ಪಡೆಗಳ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮತ್ತು ರಾಜ್ಯ ಪೊಲೀಸ್ ಪಡೆಗಳ ಸಾಮರ್ಥ್ಯ ಹೆಚ್ಚಿಸಲಿದೆ ಎನ್ನುತ್ತಾನೆ ಅಂಕುಶ್​​.

ಎಲ್ಲಿದೆ ಕಂಪನಿ: ಹುಬ್ಬಳ್ಳಿ ಪಕ್ಕದ ಕಲಘಟಗಿ ತಾಲೂಕಿನ ಕಾಡನಕೊಪ್ಪದಲ್ಲಿ ಆಸ್ಟ್ರ್ ಡಿಫೆನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಇದೆ. ತನ್ನ ಅತ್ಯಾಧುನಿಕ ಡಿಫೆನ್ಸ್ ಆರ್ & ಡಿ ಮತ್ತು ಉತ್ಪಾದನಾ ಸೌಲಭ್ಯ ಶೀಘ್ರದಲ್ಲೇ ಉದ್ಘಾಟಿಸಲು ಮತ್ತು ಅಟಲ್ ಪಿಸ್ತೂಲ್ ಉತ್ಪಾದನೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಭಾರತೀಯ ಸೇನೆಗಾಗಿ ಅಸಾಲ್ಟ್ ರೈಫಲ್ ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸುವ ಕನಸಿನೊಂದಿಗೆ, ಅಂಕುಶ್​ ಕೊರವಿ ಅವರು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 2018ರಲ್ಲಿ ಬಿಇ ಅಂತಿಮ ವರ್ಷದಲ್ಲಿದ್ದಾಗಲೇ ಸಂಶೋಧನೆ ಪ್ರಾರಂಭಿಸಿದ್ದರು. ಪದವಿಯ ನಂತರ, ಅವರು KLE CTIE ದ ಬೆಂಬಲದೊಂದಿಗೆ Astr ಡಿಫೆನ್ಸ್ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು.

ಸ್ಥಳೀಯ ವಿನ್ಯಾಸದ ಮೇಲೆ ಈಗಾಗಲೇ ಅವರು 3 ಪೇಟೆಂಟ್‌ಗಳನ್ನು ಪಡೆದಿದ್ದಾರೆ. ಸ್ವಂತ ಉತ್ಪಾದನಾ ಸೆಟಪ್ ಇಲ್ಲದಿದ್ದರೂ, ಆಸ್ಟ್ರ್ ಡಿಫೆನ್ಸ್ ತನ್ನದೇ ಆದ ಅಸಾಲ್ಟ್ ರೈಫಲ್‌ಗಳನ್ನು ಎಲ್ಲ ಅಡಚನೆಗಳನ್ನು ಎದುರಿಸಿ ನಿರ್ಮಿಸಿದೆ‌. ಇಂಡಿಯಾ ಪೆವಿಲಿಯನ್, ಡೆಫ್‌ಎಕ್ಸ್‌ಪೋ 2020ನಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು. ಈಗಾಗಲೇ ಡಿಜಿಕ್ಯೂಎ (ರಕ್ಷಣಾ) ಫೈರಿಂಗ್ ರೇಂಜ್‌ನಲ್ಲಿ ಈ ರೈಫಲ್‌ಗಳ ಪರೀಕ್ಷೆಯನ್ನೂ ಮಾಡಲಾಗಿದೆ.

ಅಂತಾರಾಷ್ಟ್ರೀಯ ರಕ್ಷಣಾ ಪ್ರದರ್ಶನದಲ್ಲಿ ಅವಕಾಶ: ಈಗ ತಮ್ಮದೇ ಆದ R&D ಮತ್ತು ಉತ್ಪಾದನಾ ಸೌಲಭ್ಯವನ್ನು ರಾಜ್ಯದ, ಕೇಂದ್ರದ ಹಾಗೂ ಡಿಫೆನ್ಸ್ ನಿಂದ ಪರವಾನಗಿ ಪಡೆದು ಕಾರ್ಯಾರಂಭಿಲು ತಯಾರಾಗಿದ್ದಾರೆ. ಆಸ್ಟ್ರ್​ ಡಿಫೆನ್ಸ್ ಮುಂಬರುವ ದಿನಗಳಲ್ಲಿ ಇನ್ನಷ್ಟು ನವೀನ ರಕ್ಷಣಾ ಉತ್ಪನ್ನಗಳನ್ನು ಹೊರತರಲು ಸಿದ್ಧವಾಗುತ್ತಿದೆ.

ಆಸ್ಟ್ರ್ ಡಿಫೆನ್ಸ್‌ನ ಸಂಶೋಧನಾ ಸಾಮರ್ಥ್ಯಗಳನ್ನು ಗುರುತಿಸಿ, ರಕ್ಷಣಾ ಉತ್ಪಾದನಾ ಇಲಾಖೆಯು ಆಸ್ಟ್ರ್​ ಡಿಫೆನ್ಸ್​ನ ನವೀನ ಉತ್ಪನ್ನಗಳನ್ನು ಪ್ರದರ್ಶಿಸಲು ಇದೇ ಅ. 18ರಿಂದ 22ರವರೆಗೆ ನಡೆಯುವ ಅಂತಾರಾಷ್ಟ್ರೀಯ ರಕ್ಷಣಾ ಪ್ರದರ್ಶನ ಡೆಫ್ ಎಕ್ಸ್‌ಪೋ 2022 ಇಂಡಿಯಾ ಪೆವಿಲಿಯನ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ಆಸ್ಟ್ರ್​ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುಜರಾತಿನ ಗಾಂಧಿ ನಗರದಲ್ಲಿ ನಡೆಯುವ ದೇಫೆಸ್ಪೋ 2022 ದಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ರಕ್ಷಣಾ ವಲಯಕ್ಕೆ ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಲು ಸಜ್ಜಾಗಿದೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಸಾಧಕನ ಪರಿಶ್ರಮ ಮುಂದಿನ ದಿನಗಳಲ್ಲಿ ಸೇನೆಯ ಬತ್ತಳಿಕೆ ಸೇರುವುದು ವಿಶೇಷವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸುವ ಮೂಲಕ ಸೇನೆ ಬಲವನ್ನು ವೃದ್ಧಿಸಲು ಶ್ರಮಿಸುತ್ತಿರುವ ಸಾಧಕನಿಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿನ ದೋಷ ಪತ್ತೆ ಮಾಡಿದ ನೀರಜ್​ ಶರ್ಮಾ: 38 ಲಕ್ಷ ರೂಪಾಯಿ ಬಹುಮಾನ

Last Updated : Sep 27, 2022, 5:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.