ETV Bharat / state

ರಣಜಿ: ಕರ್ನಾಟಕ ತಂಡದಲ್ಲಿ ಹುಬ್ಬಳ್ಳಿಯ ಪ್ರತಿಭೆಗೆ ಅವಕಾಶ - ಕರ್ನಾಟಕ ಕ್ರಿಕೆಟ್​ ತಂಡ

ರಣಜಿ ಕ್ರಿಕೆಟ್ ಟ್ರೋಫಿಯ ಪಂದ್ಯಗಳಿಗೆ ಹುಬ್ಬಳ್ಳಿಯ ಯುವ ಪ್ರತಿಭೆ ರೋಹಿತ್​ ಕುಮಾರ್ ಆಯ್ಕೆಯಾಗಿದ್ದಾರೆ.

ಸ್ಪಿನ್ನರ್ ರೋಹಿತ್​ ಕುಮಾರ್ ಎ.ಸಿ
ಸ್ಪಿನ್ನರ್ ರೋಹಿತ್​ ಕುಮಾರ್ ಎ.ಸಿ
author img

By ETV Bharat Karnataka Team

Published : Dec 28, 2023, 3:19 PM IST

ಹುಬ್ಬಳ್ಳಿ: ಪಂಜಾಬ್ ಮತ್ತು ಗುಜರಾತ್ ತಂಡಗಳ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಹುಬ್ಬಳ್ಳಿಯ ಪ್ರತಿಭೆ ರೋಹಿತ್​ ಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ಮಯಾಂಕ್ ಅಗರ್‌ವಾಲ್ ನಾಯಕತ್ವದ 16 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. ಇದರಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್​ನ ಎಡಗೈ ಸ್ಪಿನ್ನರ್ ರೋಹಿತ್​ ಕುಮಾರ್ ಎ.ಸಿ. ಸ್ಥಾನ ಪಡೆದುಕೊಂಡಿದ್ದಾರೆ.

ಜನವರಿ 5ರಿಂದ 8ರವರೆಗೆ ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿವೆ. ಜ.12ರಿಂದ 15ರವರೆಗೆ ಗುಜರಾತ್‌ನಲ್ಲಿ ಗುಜರಾತ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಿಗೆ ಈ ತಂಡವನ್ನು ಪ್ರಕಟಿಸಲಾಗಿದೆ. ಎರಡೂ ಪಂದ್ಯಾವಳಿಗಳಿಗೆ ಪಿ.ವಿ.ಶಶಿಕಾಂತ್ ತಂಡದ ಕೋಚ್ ಆಗಿರಲಿದ್ದಾರೆ.

ಹಲವು ವರ್ಷಗಳ ನಂತರ ಹುಬ್ಬಳ್ಳಿಯ ಆಟಗಾರನೊಬ್ಬನಿಗೆ ಅವಕಾಶ ದೊರೆತಿದೆ. ಮನೀಷ್ ಪಾಂಡೆ, ಸಮರ್ಥ ಆ‌ರ್., ದೇವದತ್ತ ಪಡಿಕ್ಕಲ್, ಶುಭಾಂಗ ಹೆಗಡೆ ಮೊದಲಾದ ಅನುಭವಿಗಳಿರುವ ತಂಡದಲ್ಲಿ ಅವಕಾಶ ಸಿಕ್ಕಿರುವುದು ವಿಶೇಷ.

ಇದುವರೆಗೆ 19, 23 ಮತ್ತು 25 ವರ್ಷದೊಳಗಿನ ವಿಭಾಗದಲ್ಲಿ ರಾಜ್ಯ ತಂಡದ ಪರ ಆಡಿರುವ ರೋಹಿತ್​ ಕುಮಾರ್, 13 ಪಂದ್ಯಗಳಿಂದ 70 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರ ಪ್ರತಿಭೆಯನ್ನು ರಾಜ್ಯ ಆಯ್ಕೆ ಸಮಿತಿ ಗುರುತಿಸಿದೆ. ಮೂಲತಃ ರಾಣೆಬೆನ್ನೂರಿನವರಾದ ಇವರು, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನಲ್ಲೇ ಕ್ರಿಕೆಟ್ ಜೀವನ ಆರಂಭಿಸಿದ್ದರು. ಸದ್ಯ ಧಾರವಾಡದ ಜೆಎಸ್​ಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಅಧ್ಯಯನ ಮಾಡುತ್ತಿದ್ದಾರೆ.

"ನಾನು ಆಡಿದ ವಿವಿಧ ಪಂದ್ಯಗಳಲ್ಲಿ ತೋರಿದ ಸಾಧನೆಯನ್ನು ಆಯ್ಕೆಗಾರರು ಪರಿಗಣಿಸಿದ್ದಾರೆ. ನನ್ನ ಕ್ರಿಕೆಟ್ ಜೀವನದ ಯಶಸ್ಸಿಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ವೀರಣ್ಣ ಸವಡಿ ಹಾಗೂ ಎಲ್ಲರ ಸಹಕಾರ ಕಾರಣವಾಗಿದೆ. ರಣಜಿ ತಂಡಕ್ಕೆ ಆಯ್ಕೆ ಆಗಿರುವುದು ಸಂತಸವಾಗಿದೆ" ಎಂದು ರೋಹಿತ್ ಕುಮಾರ ಎ.ಸಿ. ಹೇಳಿದರು.

ಇದನ್ನೂ ಓದಿ: ರಣಜಿ ಟ್ರೋಫಿಯ ಆರಂಭಿಕ ಎರಡು ಪಂದ್ಯಗಳಿಗೆ ಕರ್ನಾಟಕ ತಂಡ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.