ಹುಬ್ಬಳ್ಳಿ: ನಗರದ ವೈದ್ಯೆಯೊಬ್ಬರು ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಯಶಸ್ವಿಯಾಗಿ ರೋಗಿಯ ಜೀವ ಉಳಿಸಿದ್ದಾರೆ.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಹೆಬಸೂರು ಆಸ್ಪತ್ರೆಯ ವೈದ್ಯೆ ನಾಗರಿಕಾ ಶಸ್ತ್ರಚಿಕಿತ್ಸೆ ಮಾಡಿದವರು. 50 ವರ್ಷದ ಮಹಿಳೆಯೊಬ್ಬರು ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಗರದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಇದು ವಾಸಿಯಾಗಿರಲಿಲ್ಲ. ಹಾಗಾಗಿ ವೈದ್ಯೆ ನಾಗರಿಕಾ ಅವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಪ್ರಾರಂಭಿಸಿದ್ದರು.
ಮೊದಲ ಹಂತದ ಪರೀಕ್ಷೆಯಲ್ಲಿ ಮಹಿಳೆಯ ದೇಹದಲ್ಲಿ 4 ಕೆಜಿ ಗಡ್ಡೆ ಕಂಡುಬಂದಿತ್ತು. ಅದರಿಂದ ಮಹಿಳೆಯ ಪ್ರಾಣಕ್ಕೆ ಅಪಾಯ ಎಂಬುದನ್ನು ಅರಿತ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರತೆಗೆದಿದ್ದಾರೆ. ಈ ಮೂಲಕ ಯಶಸ್ವಿ ಚಿಕಿತ್ಸೆ ಮೂಲಕ ಮಹಿಳೆಯ ಪ್ರಾಣ ಉಳಿಸಿದ್ದಾರೆ. ವೈದ್ಯೆ ನಾಗರಿಕಾ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.