ETV Bharat / state

ಪೊಲೀಸರ ಮೇಲೆ ಕಲ್ಲು ತೂರಾಟ ಕೇಸ್‌.. ಈಗಲೇ ಏನೂ ಹೇಳಲ್ಲ.. ಹು-ಧಾ ಪೊಲೀಸ್ ಕಮಿಷನರ್​ ಸ್ಪಷ್ಟನೆ - ಹುಬ್ಬಳ್ಳಿ ಸುದ್ದಿ

ಕಲ್ಲು ತೂರಾಟದಿಂದ ನಾಲ್ಕು ಜನ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದೇವೆ. ತನಿಖೆ ನಡೆಯುತ್ತಿರುವುದರಿಂದ ಈಗಲೇ ಏನನ್ನೂ ಹೇಳುವುದಿಲ್ಲ ಎಂದರು.

R. deelip
ಆರ್ ದಿಲೀಪ್
author img

By

Published : Apr 3, 2020, 8:54 PM IST

ಹುಬ್ಬಳ್ಳಿ : ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿರುವ ಅರಳಿಕಟ್ಟಿ ಬಡಾವಣೆಯಲ್ಲಿ ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ ಪ್ರಕರಣದ ತನಿಖೆ ನಡೆಯುತ್ತಿದೆ. ಈಗಲೇ ಅದಕ್ಕೆ ಸಂಬಂಧಿಸಿದಂತೆ ಏನೂ ಹೇಳಲಾಗುವುದಿಲ್ಲ ಎಂದು ಹು-ಧಾ ಪೊಲೀಸ್ ಕಮಿಷನರ್​ ಆರ್‌ ದಿಲೀಪ್ ಹೇಳಿದರು.

ಪೊಲೀಸ್ ಕಮೀಷನರ್ ಆರ್​ ದಿಲೀಪ್ ಹೀಗಂದರು..​

ನಗರದಲ್ಲಿಂದು ಮಾತನಾಡಿದ ಅವರು, ಮಸೀದಿಯಲ್ಲಿ ಕೆಲವರು ನಮಾಜ್ ಮಾಡಲು ಮುಂದಾಗಿದ್ದರು‌. ನಮಾಜ್ ಮಾಡಲು ಬಂದವರಿಗೆ ಪೊಲೀಸರು ನಮಾಜ್ ಮಾಡದಂತೆ ಬುದ್ಧಿ ಹೇಳಿದ್ದರು. ಈ ಸಂದರ್ಭದಲ್ಲಿ ಸಮಾಜದ ಕೆಲ ಮುಖಂಡರು ಸಹ ನಮಾಜ್ ಮಾಡದಂತೆ ಬುದ್ಧಿ ಹೇಳಿದ್ದರು. ಇದೇ ಸಂದರ್ಭದಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.