ETV Bharat / state

ಲಾಕ್ ಡೌನ್ ಆದೇಶಕ್ಕೆ ಹು-ಧಾ ಜನರಿಂದ ಉತ್ತಮ ಸ್ಪಂದನೆ:  ಪಾಲಿಕೆ ಆಯುಕ್ತ ಇಟ್ನಾಳ - ಲಾಕ್ ಡೌನ್ ಆದೇಶಕ್ಕೆ ಹು-ಧಾ ಸ್ಪಂದನೆ

ಲಾಕ್ ಡೌನ್ ಆದೇಶಕ್ಕೆ ಹು-ಧಾ ಮಹಾನಗರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದ್ದಾರೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಹೇಳಿದರು.

Suresh Itnala
ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ
author img

By

Published : Apr 8, 2020, 8:27 AM IST

ಹುಬ್ಬಳ್ಳಿ: ಲಾಕ್ ಡೌನ್ ಆದೇಶಕ್ಕೆ ಹು-ಧಾ ಮಹಾನಗರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದ್ದಾರೆ ಅಲ್ಲದೇ ಸ್ವಯಂ ಪ್ರೇರಿತರಾಗಿ ಸ್ಪಂದನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರತಿಶತ 70-80%ರಷ್ಟು ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲಿದ್ದು, ಲಾಕ್ ಡೌನ್ ಆದೇಶಕ್ಕೆ ಬೆಂಬಲ ಸೂಚಿಸಿ ಅಲ್ಲದೇ ಕೆಲವು ಜನರು ಮಾತ್ರ ಇನ್ನಿತರ ಕಾರಣಗಳಿಂದ ಹೊರಗಡೆ ಓಡಾಡುತ್ತಿದ್ದಾರೆ. ಇನ್ನೂ ಒಂದು ವಾರ ಜನರು ಮನೆಯಲ್ಲಿದ್ದು, ಲಾಕ್ ಡೌನ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜನರು ಹೊರಗಡೆ ಬರಬಾರದು ಎಂಬುವ ಉದ್ದೇಶದಿಂದ ಹು-ಧಾ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ತರಕಾರಿ, ಹಣ್ಣು, ಅಗತ್ಯ ವಸ್ತುಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸದುದ್ದೇಶದಿಂದ ಹಲವಾರು ಕ್ರಮಗಳನ್ನು ‌ಕೈಗೊಳ್ಳಲಾಗಿದೆ.

ಅಲ್ಲದೆ ಜಿಲ್ಲಾಡಳಿತದಿಂದ ಔಷಧ ಹಾಗೂ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಆನ್ ಲೈನ್ ಸೇವೆಯನ್ನು ಕೂಡ ಮಾಡಲಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಇಲಾಖೆಯವರು ಕೂಡ ಪೂರಕ ಬೆಂಬಲ ನೀಡಿದ್ದಾರೆ ಎಂದ ಅವರು ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.

ಇನ್ನೂ ಕಿರಾಣಿ ಸಾಮಾನುಗಳಲ್ಲಿ ಸ್ವಲ್ಪ ಪ್ರಮಾಣದ ಬೆಲೆ ಏರಿಕಯಾಗಿದೆ. ಅದನ್ನು ಕೂಡ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದ ಅವರು, ಈಗಾಗಲೇ ಜೊಮ್ಯಾಟೋ, ಸ್ವಿಗಿ ಸೇರಿದಂತೆ ಆನ್ ಲೈನ್ ಸರ್ವಿಸ್ ಹಾಗೂ ಹೋಮ್ ಡೆಲಿವರಿ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಲಾಕ್ ಡೌನ್ ಸಂದರ್ಭದಲ್ಲಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಆರೋಗ್ಯದ ಹಿತದೃಷ್ಟಿಯಿಂದ ಸೇವೆ ಅವಧಿಯಲ್ಲಿ ಕಡಿತ ಮಾಡಲಾಗಿದ್ದು, ಅಲ್ಲದೇ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಸ್ಯಾನಿಟೈಜರ್ ಹೋಮ್ ಕ್ವಾರಂಟೈನ್ ಮನೆಗಳಿಂದ ಕೂಡ ತ್ಯಾಜ್ಯ ವಿಲೇವಾರಿಗೆ ಬೇರೆ ಸಂಸ್ಥೆಯಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೌರಕಾರ್ಮಿಕರ ಆರೋಗ್ಯದ ಕಾಳಜಿಯನ್ನು ಮಹಾನಗರ ಪಾಲಿಕೆ ವಹಿಸಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.