ETV Bharat / state

ಹುಬ್ಬಳ್ಳಿ: ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳಳು ಅಂದರ್​ - hubli house theft arrest

ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ನಡೆದಿದ್ದ ಎರಡು ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6 ಲಕ್ಷದ 200 ರೂ. ಮೌಲ್ಯದ 158 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

hubli
ಮನೆಗಳ್ಳರ ಬಂಧನ
author img

By

Published : Oct 6, 2020, 5:51 PM IST

ಹುಬ್ಬಳ್ಳಿ: ಮನೆಗಳ್ಳತನ‌ ಮಾಡುತ್ತಿದ್ದ ಇಬ್ಬರು ‌ಕಳ್ಳರನ್ನು ಬಂಧಿಸುವಲ್ಲಿ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಎರಡು ಮನೆ ಕಳ್ಳತನ ಮಾಡಿದ ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣನ ನಗರದಲ್ಲಿ ನಡೆದಿದ್ದ ಎರಡು ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸೂರು‌ ಕ್ರಾಸ್​ನ ದ್ಯಾಮಣ್ಣ ಕ್ವಾಟಿ ಹಾಗೂ ನಾಗರಾಜ ಕ್ವಾಟಿ ಎಂಬುವರೇ ಬಂಧಿತರು. ಬಂಧಿತರಿಂದ 6 ಲಕ್ಷದ 200 ರೂ. ಮೌಲ್ಯದ 158 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

hubli
ಆಭರಣಗಳು ವಶ

ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಕೊಪ್ಪಿಕರ್​ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರದ ಎರಡು ಮನೆಗಳು ಹಾಗೂ ನವನಗರದ ಕೆಸಿಸಿ ಬ್ಯಾಂಕ್ ಕಾಲೋನಿಯ‌ ಒಂದು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಎಪಿಎಂಸಿ ಠಾಣಾಧಿಕಾರಿ ಪ್ರಭು ಸುರಿನ ನೇತೃತ್ವದಲ್ಲಿ ಎಸ್.ಎಸ್. ಜಕ್ಕನಗೌಡ್ರ, ಎನ್.ಹೆಚ್ ಗುಡಿಮಣಿ, ಆರ್.ಎ ಸವಾರ, ಎಂ.ಜೆ ರಕ್ಕಸಗಿ ವಿ ಬಿ ಪಾಟೀಲ್, ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.