ETV Bharat / state

ಹುಬ್ಬಳ್ಳಿ: ಕೈ, ಕಾಲು ಕಟ್ಟಿ ಮನೆ ದರೋಡೆ; ₹1 ಕೋಟಿ ಮೌಲ್ಯದ ಚಿನ್ನ, ನಗದು ದೋಚಿ ದುಷ್ಕರ್ಮಿಗಳು ಪರಾರಿ - ಹುಬ್ಬಳ್ಳಿಯಲ್ಲಿ ಕೈ ಕಾಲು ಕಟ್ಟಿ ಮನೆ ದರೋಡೆ

ಹುಬ್ಬಳ್ಳಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ನಿವಾಸಿಗಳ ಕೈ, ಕಾಲು ಕಟ್ಟಿ ಹಾಕಿ ಕೋಟ್ಯಂತರ ರೂಪಾಯಿ ಮೌಲ್ಯದ ನಗ, ನಾಣ್ಯ ದೋಚಿದ್ದಾರೆ.

house robbery in hubballi
ಹುಬ್ಬಳ್ಳಿಯಲ್ಲಿ ಮನೆ ದರೋಡೆ
author img

By ETV Bharat Karnataka Team

Published : Sep 21, 2023, 11:35 AM IST

Updated : Sep 21, 2023, 1:37 PM IST

ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ದರೋಡೆಕೋರರು ಹುಬ್ಬಳ್ಳಿಯಲ್ಲಿ ದುಷ್ಕೃತ್ಯ ಎಸಗಿದ್ದಾರೆ. ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್​​ನ ಮನೆಯೊಂದರಲ್ಲಿ ತಡರಾತ್ರಿ ಘಟನೆ ನಡೆದಿದೆ.

ವಿದ್ಯಾಮಂದಿರ ಬುಕ್ ಡಿಪೋ ಮಾಲೀಕ ಉಲ್ಲಾಸ ದೊಡ್ಡಮನಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆ ಕಿಟಕಿಯ ಕಬ್ಬಿಣದ ಗ್ರಿಲ್ ತುಂಡರಿಸಿ ಮನೆಯೊಳಗೆ ನುಗ್ಗಿದ ದರೋಡೆಕೋರರು, ಮನೆಯಲ್ಲಿದ್ದವರ ಕೈ, ಕಾಲು ಕಟ್ಟಿ ಹಾಕಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದಾರೆ.

ಸುಮಾರು 8 ಜನರಿದ್ದ ಡಕಾಯಿತರ ತಂಡ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗೋಕುಲ ರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಕಿಟಕಿ ಮುರಿದು ಒಳ ನುಗ್ಗಿ ಕೃತ್ಯ: ಖದೀಮರು ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್​ಗಳನ್ನು ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದವರನ್ನು ಹೆದರಿಸಿ ಅವರ ಕೈ, ಕಾಲು ಕಟ್ಟಿ ಹಾಕಿದ್ದಾರೆ. ನಂತರ ಮನೆಯೊಳಗಿನ ಚಿನ್ನಾಭರಣ ಮತ್ತು ನಗದು ದೋಚಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೈಪ್ರೊಫೈಲ್​ ಹನಿಟ್ರ್ಯಾಪ್ ಪ್ರಕರಣದ ಆರೋಪಿ ಕಳ್ಳತನ ಕೇಸ್​ನಲ್ಲಿ ಅರೆಸ್ಟ್​

ಬೆಳಗಾವಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್: ವಾಟ್ಸ್​ಆ್ಯಪ್​ನಲ್ಲಿ ಸ್ಕೆಚ್ ಹಾಕಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಗೋಕಾಕ್ ಗ್ರಾಮೀಣ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬುಧವಾರ ಯಶಸ್ವಿಯಾಗಿದ್ದಾರೆ.

ಬೆಣಚಿನಮರಡಿಯ ಖಿಲಾರಿ ಮತ್ತು ಗೋಕಾಕ್​ ಎಸ್‌ಪಿ ಸರ್ಕಾರ ಎಂಬ ಹೆಸರಿಟ್ಟುಕೊಂಡು ಈ ಎರಡು ಗ್ಯಾಂಗ್ ದರೋಡೆಗೆ ಇಳಿಯುತ್ತಿದ್ದವು. ಗೋಕಾಕ್​ ತಾಲೂಕಿನ ಬೆಣಚಿನಮರಡಿಯ ದುರ್ಗಪ್ಪ ವಡ್ಡರ, ನಾಗಪ್ಪ ಮಾದರ, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ಧ ತಪಸಿ, ಬೀರಸಿದ್ಧ ಗುಂಡಿ, ಉದ್ದಪ್ಪ ಖಿಲಾರಿ, ಗೋಕಾಕ್​ನ ಪರಶುರಾಮ ಗೊಂಧಳಿ ಹಾಗೂ ಆಕಾಶ ತಳವಾರ ಬಂಧಿತರು.

ಇವರು ದರೋಡೆಯ ಪೂರ್ಣ ಸ್ಕೆಚ್​ ಅನ್ನು ವಾಟ್ಸಾಆ್ಯಪ್​ನಲ್ಲೇ ಹಾಕಿಕೊಂಡು ಬಳಿಕ ಟಾರ್ಗೆಟ್ ಮಾಡುತ್ತಿದ್ದರು. ತಮ್ಮಲ್ಲೇ ಗ್ಯಾಂಗ್​ಗಳನ್ನು ಮಾಡಿಕೊಂಡು ಸುಲಿಗೆ ಮಾಡುತ್ತಾ ಜನರಲ್ಲಿ ಭೀತಿ ಹುಟ್ಟಿಸಿದ್ದರು. ಇವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರಿಂದ 9 ಮೊಬೈಲ್, 15 ಗ್ರಾಂ ಚಿನ್ನಾಭರಣ, 6 ಬೈಕ್ ಸೇರಿದಂತೆ 7 ಲಕ್ಷ 89 ಸಾವಿರ ಮೌಲ್ಯದ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Last Updated : Sep 21, 2023, 1:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.