ETV Bharat / state

ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಗುಡುಗಿದ ಹೊರಟ್ಟಿ

ಮೈತ್ರಿ ಮಾಡಿಕೊಳ್ಳುವಾಗಲೇ ಕೆಲವು ಷರತ್ತು ಮಾಡಿಕೊಳ್ಳಬೇಕಿತ್ತು. ಈಗ ಎಲ್ಲ ಮುಗಿದ ಮೇಲೆ ಮಾತನಾಡುವುದು ಸಮಂಜಸವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

author img

By

Published : Aug 23, 2019, 7:11 PM IST

ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೈತ್ರಿ ಮಾಡಿಕೊಳ್ಳುವಾಗಲೇ ಕೆಲವು ಷರತ್ತು ಮಾಡಿಕೊಳ್ಳಬೇಕಿತ್ತು. ಈಗೆಲ್ಲಾ ಮುಗಿದಿದೆ, ಪ್ರಸ್ತುತ ಹೇಳಿಕೆಗಳನ್ನು ನೀಡುತ್ತಿರುವುದು ಸಮಂಜಸವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಗುಡುಗಿದ ಹೊರಟ್ಟಿ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಿರಿಯರು. ಅವರೆನೋ ಒಂದು ಮಾತು ಆಡಿರಬಹುದು. ಸಿದ್ದರಾಮಯ್ಯ ಅದನ್ನು ಈ ರೀತಿ ತೆಗೆದುಕೊಳ್ಳಬಾರದಿತ್ತು ಎಂದರು. ಜೊತೆಗೆ ಮೈತ್ರಿ ನಾಯಕರ ಎಡವಟ್ಟಿಗೆ ಬಿಜೆಪಿ ಸರ್ಕಾರ ಬಂದಿದೆಯೇ ವಿನಃ ಅವರದೇನು ತಪ್ಪಿಲ್ಲ. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ದಾರೆ ಎಂದರು.

ಅಲ್ಲದೇ, ನಾನು ಉಮೇಶ್ ಕತ್ತಿ ಜೊತೆ ಮಾತನಾಡಿದ್ದು ನಿಜ. ಬಹಳ ಜನ ಜನತಾ ಪರಿವಾರದಲ್ಲಿದ್ದವರೇ. ಮತ್ತೆ ಜನತಾ ಪರಿವಾರ ಕಟ್ಟಬೇಕು ಅನ್ನೋ ಭಾವನೆ ಅನೇಕರಲ್ಲಿದೆ. ನೋಡೋಣ ಪರಿಸ್ಥಿತಿ ಹೇಗೆ ಬರುತ್ತೆ ಎಂದು ಮಾಧ್ಯಮದವರ ಪ್ರಶ್ನೆಗೆ ಹೊರಟ್ಟಿ ಪ್ರತಿಕ್ರಿಯಿಸಿದರು.

ಇನ್ನು, ಬಿಜೆಪಿಯಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಆದ್ದರಿಂದ ಬಿಜೆಪಿಯಲ್ಲಿ ಅಸಮಾಧಾನವಿರುವ ಶಾಸಕರು ಎರಡ್ಮೂರು ದಿನಗಳಲ್ಲಿ ಸುಮ್ಮನಾಗ್ತಾರೆ. ಈ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೊರಟ್ಟಿ ಭವಿಷ್ಯ ನುಡಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.