ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಯ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿರುವ ಜನರು ಆಸ್ಪತ್ರೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ.
ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧಾರವಾಡ ಜಿಲ್ಲೆಯ ಹಲವರು ಆಸ್ಪತ್ರೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಇವರಲ್ಲಿ ಕೆಲವು ಮಂದಿ ವೈದ್ಯಕೀಯ ಸಿಬ್ಬಂದಿ ಜತೆ ಜಗಳ ಮಾಡಿಕೊಂಡಿದ್ದಾರೆ.
ಟೂತ್‌ಪೇಸ್ಟ್, ಬ್ರಶ್ ಹಾಗೂ ಒಳ್ಳೆಯ ಉಪಹಾರ ಬೇಕು. ನಮಗೆ ಲೋಟದಲ್ಲಿ ನೀರು ಬೇಡ, ಮಿನರಲ್ ವಾಟರ್ ಬೇಕು. ನಮಗೆ ಕೊರೊನಾ ಇಲ್ಲ, ನಮ್ಮ ವರದಿ ನೆಗೆಟಿವ್ ಬರುತ್ತೆ, ನಾವೆಲ್ಲಾ ಆರಾಮಾಗಿದ್ದೇವೆ. ನಾವು ವಿಐಪಿಗಳು, ನಮಗೆ ವಿಐಪಿ ತರಹ ಟ್ರೀಟ್ ಮಾಡಿ, ಇಲ್ಲಾಂದ್ರೆ ಹೊರಗೆ ಹೋಗ್ತೀವಿ ಎಂದು ವೈದ್ಯಕೀಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ.
ಇವರ ಈ ವರ್ತನೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ತಲೆನೋವು ತಂದಿದೆ.