ETV Bharat / state

ಶೆಟ್ಟರ್ ಮನೆ ಹತ್ತಿರ ಧರೆಗೆ ಉರುಳಿದ ಮರ: ಜೀಪ್​​​ನಲ್ಲಿದ್ದ ಪೊಲೀಸ್ ಸಿಬ್ಬಂದಿ ಬಚಾವ್​​! - ಶೆಟ್ಟರ್ ಮನೆ ಹತ್ತಿರ ಧರೆಗೆ ಉರುಳಿದ ಮರ

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಮನೆ ಎದುರು ಮರವೊಂದು ಧರೆಗೆ ಉರುಳಿದ್ದು, ಜಗದೀಶ್​ ಶೆಟ್ಟರ್ ಪೊಲೀಸ್​ ಬೆಂಗಾವಲು ವಾಹನದ ಮೇಲೆಯೇ ಮರ ಉರುಳಿ ಬಿದ್ದಿರುವ ಪರಿಣಾಮ ವಾಹನ ಜಖಂಗೊಂಡಿದೆ.

Tree fallen due to over rain in hubli
Tree fallen due to over rain in hubli
author img

By

Published : May 5, 2022, 9:50 PM IST

Updated : May 6, 2022, 6:13 AM IST

ಹುಬ್ಬಳ್ಳಿ: ಎರಡನೇ ದಿನವೂ ಹುಬ್ಬಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರೆದಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರಗಳು ಧರೆಗೆ ಉರುಳಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಯ ಆವರಣದಲ್ಲಿಯೇ ಸಂಭವಿಸಬಹುದಾದ ಬಹುದೊಡ್ಡ ಅಪಘಾತ ತಪ್ಪಿದಂತಾಗಿದೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಮನೆ ಎದುರು ಮರವೊಂದು ಧರೆಗೆ ಉರುಳಿದ್ದು, ಜಗದೀಶ್​ ಶೆಟ್ಟರ್ ಪೊಲೀಸ್​ ಬೆಂಗಾವಲು ವಾಹನದ ಮೇಲೆಯೇ ಮರ ಉರುಳಿ ಬಿದ್ದಿರುವ ಪರಿಣಾಮ ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಪೊಲೀಸ್ ಜೀಪ್​​ನಲ್ಲಿದ್ದ ಚಾಲಕ ಪಾರಾಗಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಬೃಹತ್ ಗಾತ್ರದ ಮರಗಳು ನೆಲಕ್ಕೆ ಬಿದ್ದಿವೆ.

ಶೆಟ್ಟರ್ ಮನೆ ಹತ್ತಿರ ಧರೆಗೆ ಉರುಳಿದ ಮರ: ಜೀಪ್​​​ನಲ್ಲಿದ್ದ ಪೊಲೀಸ್ ಸಿಬ್ಬಂದಿ ಬಚಾವ್​​!

ಮೇಲ್ಛಾವಣಿ ಕುಸಿತ: ಗೋಪನಕೊಪ್ಪದ ಸಿದ್ದರಾಮನಗರದ ಮೂರನೇ ಕ್ರಾಸ್​ನಲ್ಲಿ ನಡೆದಿದೆ. ನಿನ್ನೆಯಿಂದಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮಧ್ಯಾಹ್ನದವರೆಗೆ ಸುಡುವ ಬಿಸಿಲು ಸಂಜೆಯಾಗುತ್ತಿದ್ದಂತೆಯೇ ವರುಣನ ಆಗಮನವಾಗಿದೆ. ನಿನ್ನೆಯೂ ಸಾಕಷ್ಟು ಹಾನಿ ಮಾಡಿದ್ದ ಮಳೆ ಇಂದು ಕೂಡ ತನ್ನ ರೌದ್ರನರ್ತನ ಮುಂದುವರೆಸಿದೆ. ಏಕಾಏಕಿ ಸುರಿದ ಮಳೆಯಿಂದ ಮರ ಬಿದ್ದಿದ್ದು, ಮನೆಯ ಛಾವಣಿ ಕುಸಿದಿದೆ.

ಇದನ್ನೂ ಓದಿ: ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್ ಚಿನ್ನ ಪತ್ತೆ

Last Updated : May 6, 2022, 6:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.