ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರದ ಆರೋಗ್ಯ ಸೇತು ಆ್ಯಪ್ ಅನ್ನು ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಡೌನ್ ಲೋಡ್ ಮಾಡಿಕೊಂಡರು.
ಕೊರೊನಾ ನಿಯಂತ್ರಣಕ್ಕೆ ಈ ಆ್ಯಪ್ ಉತ್ತಮ ಮಾಹಿತಿ, ಸಲಹೆಗಳನ್ನು ನೀಡಲಿದೆ. ಜಿಲ್ಲೆಯ ಜನತೆ ಅಧಿಕ ಸಂಖ್ಯೆಯಲ್ಲಿ ಇದನ್ನು ಡೌನ್ ಲೋಡ್ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಎಲ್ಲಾ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲೆಯ ಜನತೆಗೆ ಸಚಿವರು ಕರೆ ನೀಡಿದ್ದಾರೆ.