ಹುಬ್ಬಳ್ಳಿ: ಕೈ ನಾಯಕರಿಗೆ ಕೆಲಸವಿಲ್ಲ, ಹೀಗಾಗಿ ಅವರಿಗೆ ಏನೆನೋ ಯೋಚನೆಗಳು ಬರುತ್ತವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದರು.
ನಗರದಲ್ಲಿಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಮ್ಮಲ್ಲಿ ಯಾವುದೇ ಖಾತೆ ಬದಲಾವಣೆ ಇಲ್ಲ. ನಮ್ಮ ನಾಯಕರಿಗೆ ಗೊತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಎಲ್ಲರ ಅಳಿಲು ಸೇವೆ ಇದೆ. ಅದಕ್ಕೆ ಬಿಎಸ್ವೈ ಶಕ್ತಿ ಪ್ರಮುಖವಾಗಿದೆ. ಯಡಿಯೂರಪ್ಪ ಅವರೊಂದು ಮರ ಇದ್ದಂತೆ. ನಾವು ಕೊಂಬೆಗಳಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದರು.
ಡಿಸಿಎಂ ಸ್ಥಾನ ವಿಚಾರವಾಗಿ ಮಾತನಾಡಿ, ನಮ್ಮ ಸಿಎಂ ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸ್ವಲ್ಪ ಕಾಲಾವಕಾಶ ಕೊಡಬೇಕಾಗುತ್ತೆ. ಯಾಕಂದ್ರೆ, ಬರಿದಾಗಿರುವ ಬೊಕ್ಕಸವನ್ನು ತುಂಬಬೇಕಾಗಿದೆ. ಭಗವಂತ ಒಂದು ದಿನ ನಮ್ಮ ಆಸೆ ಈಡೇರಿಸಬಹುದು. ನಮ್ಮ ನಾಯಕರ ಮೇಲೆ ನಮಗೆ ನಂಬಿಕೆ ಇದೆ. ಅವರು ಒಳ್ಳೆಯ ಸ್ಥಾನ ಕೊಟ್ಟೆ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.