ಹುಬ್ಬಳ್ಳಿ: ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಯಾತ್ರೆಗೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ವಾಣಿಜ್ಯನಗರಿಗೆ ಆಗಮಿಸಿದ ಮಾಜಿ ಸಿಎಂಗೆ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮೂರು ಸಾವಿರ ಮಠ ಹಾಗೂ ದುರ್ಗದ ಬೈಲ್ ಸ್ಥಳಗಳಿಗೆ ಭೇಟಿ ನೀಡಿದ ಅವರಿಗೆ ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ಸಂಜೆಯಿಂದಲೇ ಮಳೆ ಸುರಿಯುತ್ತಿದ್ದು, ಇದರ ನಡುವೆಯೇ ಜನತಾ ಜಲಧಾರೆಯ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಪಾಲ್ಗೊಂಡಿದ್ದು, ಕಂಡುಬಂತು.
ಇದನ್ನೂ ಓದಿ: ಕಾರು ಅಪಘಾತಕ್ಕೆ ಕಾರಣವಾಯ್ತು 'ಇಲಿ'; ಮಗು ಸಾವು, ಮೂವರಿಗೆ ಗಾಯ