ಹುಬ್ಬಳ್ಳಿ: ರಾಜ್ಯ ಹಾಗೂ ದೇಶ ಎಂಬುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ ಕದಡಲು ಬಿಡಬೇಡಿ. ಸರ್ಕಾರ ಜನರದ್ದು, ಜನರನ್ನು ಕಾಪಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಬ್ಯಾನ್ ಮಾಡಿದ್ದಾರೆ. ಈ ರೀತಿಯ ವಾತಾವರಣದಿಂದ ಏನನ್ನು ಸಾಧನೆ ಮಾಡ್ತೀರಿ?, ಅಧಿಕಾರಕ್ಕಾಗಿ ರಕ್ತದೋಕುಳಿ ಆಡಬೇಕಾ? ಸಾಮರಸ್ಯ ಕೆಡಿಸಿ ಬದುಕುವುದಾದ್ರೂ ಎಷ್ಟು ದಿನ? ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಮುಸ್ಲಿಮರು ಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಬಂದ್ ಮಾಡಿದ್ದಾರೆ. ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡೆಯಬಹುದು. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಜನರ ರಕ್ತದ ಮೇಲೆ ನೀವು ಅಧಿಕಾರ ಮಾಡಬೇಕಾ?. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆ ಬಗ್ಗೆ ಗಮನ ಕೊಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹಿಜಾಬ್ ಧರಿಸಿ ಯಾವುದೇ ಪರೀಕ್ಷೆ ಬರೆಯಲು ಅವಕಾಶವಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ
ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ: ಕಾಂಗ್ರೆಸ್ನವರು ಮಹದಾಯಿಗಾಗಿ ಮಾಡಿದ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಹೆಚ್‌ಡಿಕೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಲ್ಲಿನ ಮಹಿಳೆಯರು ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ್ರು. ರೈತರನ್ನು ಹೊಡೆದಟ್ಟಿದ್ದು ಕಾಂಗ್ರೆಸ್ ಸರ್ಕಾರ. ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.