ETV Bharat / state

ನಾನು ಸಿಎಂ ಸ್ಥಾನದ ರೇಸ್​ನಲ್ಲಿ ಇಲ್ಲ: ಹೆಚ್​ಡಿಕೆ ಸ್ಪಷ್ಟನೆ - H D Kumaraswamy news

ಬಿಜೆಪಿಯವರು ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಜನರ ಸಮಸ್ಯೆಗಳನ್ನು ಸರಿ ಪಡಿಸಿಕೊಳ್ಳುವುದಕ್ಕಿಂತ ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

H D Kumaraswamy reaction about By election
ನಾನು ಸಿಎಂ ಸ್ಥಾನದ ರೇಸ್​ನಲ್ಲಿ ಇಲ್ಲ: ಹೆಚ್​ಡಿಕೆ
author img

By

Published : Dec 2, 2019, 2:57 PM IST

ಹುಬ್ಬಳ್ಳಿ: ರಾಜ್ಯದ ಜನರ ಹಿತದೃಷ್ಟಿಯಿಂದ ಉಪಚುನಾವಣೆ ನಂತರ ಮಹತ್ವದ ಬದಲಾವಣೆಗಳಾಗಲಿವೆ. ನನ್ನ ಪಕ್ಷ ರಾಜ್ಯದ ಜನರ ಹಿತದೃಷ್ಟಿಯನ್ನಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.

ನಾನು ಸಿಎಂ ಸ್ಥಾನದ ರೇಸ್​ನಲ್ಲಿ ಇಲ್ಲ: ಹೆಚ್​ಡಿಕೆ

ನಗರದ ವಿಮಾನ ‌ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪಚುನಾವಣೆ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಫಲಿತಾಂಶ ನೀಡಲಿದೆ. ರಾಜ್ಯದ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ ಚುನಾವಣೆಯಾಗಿದೆ ಎಂದರು. ಹದಿನೈದು ಅನರ್ಹರನ್ನು ಬಿಜೆಪಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ರಾಜ್ಯದ ಮಂತ್ರಿ ಮಾಡಿದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್​ನವರು ಅಧಿಕಾರಕ್ಕಾಗಿ ಯಾರಿಗೆ ಬೇಕಾದರೂ ಕೊಡ ಹಿಡಿಯುತ್ತಾರೆ ಎಂಬ ಶ್ರೀನಿವಾಸ ಪ್ರಸಾದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೇ ನೀಡಿದ ಅವರು, ಶ್ರೀನಿವಾಸ ಪ್ರಸಾದ ಇಲ್ಲಿಯವರೆಗೆ ಎಲ್ಲ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅವರು ಎಲ್ಲ ಕಡೆಯೂ ಅಲೆದಾಡಿದ್ದಾರೆ‌. ಆದರೇ ನಾವು ಅವರಂತೆ ಎಲ್ಲಿ ಬೇಕೋ ಅಲ್ಲಿ ಕೊಡೆ ಹಿಡಿಯುವುದಿಲ್ಲ. ನಮಗೆ ಎಲ್ಲಿ ಅನುಕೂಲ ಆಗುತ್ತದೆ ಅಲ್ಲಿ ಮಾತ್ರ ಕೊಡೆ ಹಿಡಿಯುತ್ತೇವೆ. ಶ್ರೀನಿವಾಸ ಪ್ರಸಾದ ಅವರು ಹಿರಿಯರಿದ್ದಾರೆ. ಬಾಯಿ ಚಪಲಕ್ಕೆ ಏನು ಬೇಕಾದರೂ ಮಾತನಾಡಬಾರದು. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ಮಾಡಿದ್ದಾಗ ನಾನೇನು ಅವರ ಕೊಡೆ ಹಿಡಿಯಿರಿ ಎಂದು ಹೋಗಿರಲಿಲ್ಲ. ಅವರೆ ನನ್ನ ಕಡೆಗೆ ಬಂದಿದ್ದರು ಎಂದರು.
ನಾವು ಯಾರೊಂದಿಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿಲ್ಲ ಕಾಂಗ್ರೆಸ್ ಪಕ್ಷದವರು ಅವರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ನಾವು ನಮ್ಮ ಅಭ್ಯರ್ಥಿಗಳು ಪರ ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆ ನೋಡಿದರೇ ಮತ್ತೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣದ ಲಕ್ಷಣ ಗೋಚರಿಸುತ್ತಿವೆ. ದೇಶದಲ್ಲಿ ಯಾರು ಏನ ಬೇಕಾದರು ಆಗಬಹುದು. ಉದ್ದವ್ ಠಾಕ್ರೆ ಸಿಎಂ ಆದರು. ರಾಜ್ಯದಲ್ಲಿಯೂ ಕೂಡ ನಂಬರ್ ಗೇಮ್ ಯಾರಿಗೆ ಒಲೆಯುತ್ತದೆ ಅವರು ಸಿಎಂ ಆಗಬಹುದು ಎಂದು ಮಾತಿನ ಚಾಟಿ ಬೀಸಿದರು.

ಸಿಎಂ ಸ್ಥಾನದ ರೇಸ್​ನಲ್ಲಿ ಸುಮಾರು ಜನ ಇದ್ದಾರೆ. ಆದರೇ ನಾನು ಸಿಎಂ ಸ್ಥಾನದ ರೇಸ್​ನಲ್ಲಿ ಇಲ್ಲ ಎಂದರು. ನನ್ನ ಅಧಿಕಾರಿ ಅವಧಿಯಲ್ಲಿ ಎಲ್ಲ ಶಾಸಕ ಸಚಿವರನ್ನು ಒಂದೇ ರೀತಿಯಲ್ಲಿ ನೋಡಿದ್ದೇನೆ. ಎಲ್ಲರಿಗೂ ಒಂದೇ ರೀತಿ ಅನುದಾನ ಬಿಡುಗಡೆ ಮಾಡಿದ್ದೇನೆ ಅದು ಯಾವುದು ಅವರಿಗೆ ಗೋಚರಿಸಲಿಲ್ಲ ಎಂದರು. ಹಲವಾರು ಜನರು ಅಪ್ಪ ಮಕ್ಕಳ ಪಕ್ಷ ಕಿತ್ತು ಎಸೆಯುತ್ತೇನೆ ಎಂದ ಮನೆಗೆ ಹೋಗಿದ್ದಾರೆ. ನಮ್ಮ ಪಕ್ಷ ಕಿತ್ತು ಒಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿ‌ಕಾರಿದರು.

Intro:ಹುಬ್ಬಳ್ಳಿ-04

ರಾಜ್ಯದ ಜನರ ಹಿತದೃಷ್ಟಿಯಿಂದ ಉಪಚುನಾವಣೆ ನಂತರ ಮಹತ್ವದ ಬದಲಾವಣೆಗಳಾಗಲಿವೆ. ನನ್ನ ಪಕ್ಷ ರಾಜ್ಯದ ಜನರ ಹಿತದೃಷ್ಟಿಯನ್ನಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.
ನಗರದ ವಿಮಾನ ‌ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪಚುನಾವಣೆ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಫಲಿತಾಂಶ ನೀಡಲಿದೆ. ರಾಜ್ಯದ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ ಚುನಾವಣೆಯಾಗಿದೆ ಎಂದರು.
ಹದಿನೈದು ಅನರ್ಹರನ್ನು ಬಿಜೆಪಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ರಾಜ್ಯದ ಮಂತ್ರಿ ಮಾಡಿದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯವರು ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರು ಇಳಿಯುತ್ತಾರೆ. ಜನರ ಸಮಸ್ಯೆಗಳನ್ನು ಸರಿ ಪಡಿಸಿಕೊಳ್ಳುವುದಕ್ಕಿಂತ ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದರು.

ಜೆಡಿಎಸ್ ನವರು ಅಧಿಕಾರಕ್ಕಾಗಿ ಯಾರಿಗೂ ಬೇಕಾದ್ರು ಕೊಡ ಹಿಡಿಯುತ್ತಾರೆ ಎಂಬ ಶ್ರೀನಿವಾಸ ಪ್ರಸಾದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೇ ನೀಡಿದ ಅವರು, ಶ್ರೀನಿವಾಸ ಪ್ರಸಾದ ಇಲ್ಲಿಯವರೆಗೆ ಎಲ್ಲ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅವರು ಎಲ್ಲ ಕಡೆಯೂ ಅಲೆದಾಡಿದ್ದಾರೆ‌.ಆದರೇ ನಾವು ಅವರಂತೆ ಎಲ್ಲಿ ಬೇಕೋ ಅಲ್ಲಿ ಕೊಡೆ ಹಿಡಿಯುವುದಿಲ್ ಲ.ನಮಗೆ ಎಲ್ಲಿ ಅನುಕೂಲ ಆಗುತ್ತದೆ ಅಲ್ಲಿ ಮಾತ್ರ ಕೊಡೆ ಹಿಡಿಯುತ್ತೇವೆ. ಶ್ರೀನಿವಾಸ ಪ್ರಸಾದ ಅವರು ಹಿರಿಯರಿದ್ದಾರೆ. ಬಾಯಿ ಚಪಲಕ್ಕೆ ಏನು ಬೇಕಾದರೂ ಮಾತನಾಡಬಾರದು. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ಮಾಡಿದ್ದಾಗ ನಾನೇನು ಅವರ ಕೊಡೆ ಹಿಡಿಯಿರಿ ಎಂದು ಹೋಗಿರಲಿಲ್ಲ. ಅವರೆ ನನ್ನ ಕಡೆಗೆ ಬಂದಿದ್ದರು ಎಂದರು.
ನಾವು ಯಾರೊಂದಿಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿಲ್ಲ ಕಾಂಗ್ರೆಸ್ ಪಕ್ಷದವರು ಅವರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ನಾವು ನಮ್ಮ ಅಭ್ಯರ್ಥಿಗಳು ಪರ ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆ ನೋಡಿದರೇ ಮತ್ತೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣದ ಲಕ್ಷಣ ಗೋಚರಿಸುತ್ತಿವೆ.ದೇಶದಲ್ಲಿ ಯಾರು ಏನ ಬೇಕಾದರು ಆಗಬಹುದು. ಉದ್ದವ್ ಠಾಕ್ರೆ ಸಿಎಂ ಆದರೂ.ರಾಜ್ಯದಲ್ಲಿಯೂ ಕೂಡ ನಂಬರ್ ಗೇಮ್ ಯಾರಿಗೆ ಒಲೆಯುತ್ತದೆ ಅವರು ಸಿಎಂ ಆಗಬಹುದು ಎಂದು ಮಾತಿನ ಚಾಟಿ ಬೀಸಿದರು.
ಸಿಎಂ ಸ್ಥಾನದ ರೇಸ್ ನಲ್ಲಿ ಸುಮಾರು ಜನ ಇದ್ದಾರೆ. ಆದರೇ ನಾನು ಸಿಎಂ ಸ್ಥಾನದ ರೇಸ್ ನಲ್ಲಿ ಇಲ್ಲ ಎಂದರು.
ನನ್ನ ಅಧಿಕಾರಿ ಅವಧಿಯಲ್ಲಿ ಎಲ್ಲ ಶಾಸಕ ಸಚಿವರನ್ನು ಒಂದೇ ರೀತಿಯಲ್ಲಿ ನೋಡಿದ್ದೇನೆ. ಎಲ್ಲರಿಗೂ ಒಂದೇ ರೀತಿ ಅನುದಾನ ಬಿಡುಗಡೆ ಮಾಡಿದ್ದೇನೆ ಅದು ಯಾವುದು ಅವರಿಗೆ ಗೋಚರಿಸಲಿಲ್ಲ ಎಂದರು. ಹಲವಾರು ಜನರು ಅಪ್ಪ ಮಕ್ಕಳ ಪಕ್ಷ ಕಿತ್ತು ಎಸೆಯುತ್ತೇನೆ ಎಂದ ಮನೆಗೆ ಹೋಗಿದ್ದಾರೆ.ನಮ್ಮ ಪಕ್ಷ ಕಿತ್ತು ಒಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿ‌ಕಾರಿದರು.

ಬೈಟ್ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿBody:H B GaddadConclusion:Etv hubli

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.